ಕರ್ನಾಟಕ

karnataka

ETV Bharat / state

ಚಿತ್ತಾಪುರ ಶಾಸಕ ಪ್ರಿಯಾಂಕ್​ ಖರ್ಗೆಗೆ ಕೊರೊನಾ... ಟ್ವೀಟ್ ಮೂಲಕ ಮಾಹಿತಿ - ಕೋವಿಡ್​ ಸೋಂಕು

ಸೋಂಕು ತಗುಲಿರುವ ಬಗ್ಗೆ ತಮ್ಮ ಟ್ವಿಟರ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಖರ್ಗೆ, ವೈದ್ಯಕೀಯ ವರದಿ ಪ್ರಕಾರ ನನಗೆ ಸೋಂಕು ತಗುಲಿರುವದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

priyank kharge
priyank kharge

By

Published : Sep 20, 2020, 1:44 AM IST

ಕಲಬುರಗಿ: ಕಾಂಗ್ರೆಸ್ ನಾಯಕ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆಗೆ ಕೊರೊನಾ ಸೋಂಕು ತಗುಲಿರುವದು ದೃಢಪಟ್ಟಿದೆ.

ಸೋಂಕು ತಗುಲಿರುವ ಬಗ್ಗೆ ತಮ್ಮ ಟ್ವಿಟರ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಖರ್ಗೆ, ವೈದ್ಯಕೀಯ ವರದಿ ಪ್ರಕಾರ ನನಗೆ ಸೋಂಕು ತಗುಲಿರುವದು ದೃಢಪಟ್ಟಿದೆ. ಆದರೆ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಕೆಲ ದಿನಗಳವರೆಗೆ ಯಾರೂ ಭೇಟಿಯಾಗುವ ಪ್ರಯತ್ನ ಮಾಡಬೇಡಿ, ಸಂಪೂರ್ಣವಾಗಿ ಗುಣಮುಖನಾದ ನಂತರ ಪ್ರತಿಯೊಬ್ಬರನ್ನೂ ಭೇಟಿಯಾಗುತ್ತೇನೆ. ನಿಮ್ಮೆಲ್ಲರ ಹಾರೈಕೆಗಳೊಂದಿಗೆ ಆದಷ್ಟು ಶೀಘ್ರವೇ ಗುಣಮುಖನಾಗಿ, ಮತ್ತೆ ನನ್ನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದ್ದು, ಯಾರೂ ಆತಂಕ ಪಡುವ ಆಗತ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.ಅಲ್ಲದೆ ಕಳೆದೆರಡು ದಿನಗಳಿಂದ ತಮ್ಮೊಂದಿಗೆ ನೇರ ಸಂಪರ್ಕಕ್ಕೆ ಬಂದವರು ದಯಮಾಡಿ ಕೋವಿಡ್​ ತಪಾಸಣೆ ಮಾಡಿಸಿಕೊಳ್ಳಿ ಎಂದು ವಿನಂತಿ ಮಾಡಿದ್ದಾರೆ. ಅಧಿವೇಶನ ಹತ್ತಿರ ಇರುವಾಗಲೇ ಪ್ರಿಯಾಂಕ್ ಖರ್ಗೆಗೆ ಸೋಂಕು ತಗುಲಿರುವುದು ಅವರ ಅಭಿಮಾನಿಗಳಲ್ಲಿ ಬೆಸರ ಮೂಡಿಸಿದೆ‌. ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ABOUT THE AUTHOR

...view details