ಕಲಬುರಗಿ : ಬಿಜೆಪಿಯವರಿಗೆ ದೇಶದ ಅಭಿವೃದ್ಧಿ ಬಗ್ಗೆ ಚಿಂತೆಯಿಲ್ಲ. ದಿನದ 24 ಗಂಟೆ ಚುನಾವಣೆ ಗೆಲ್ಲುವುದರ ಬಗ್ಗೆಯೇ ಚಿಂತನೆ ಮಾಡುತ್ತಿರುತ್ತಾರೆ. ಕರ್ನಾಟಕದಲ್ಲಿ ಚುನಾವಣೆ ಸಮೀಪಿಸಿದೆ ಅಂತಾನೇ ಮೋದಿ ರಾಜ್ಯಕ್ಕೆ ಬರುತ್ತಿರುವುದು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿಯವರ ಕಾರ್ಯವೈಖರಿ ನೋಡಿದ್ರೆ ಗೊತ್ತಾಗುತ್ತೆ ಇದೊಂದು ಮಿನಿಮಮ್ ಗೌರ್ನಮೆಂಟ್‌ನೂ ಅಲ್ಲ ಅನ್ನೋದು. ಗುಜರಾತ್‌ನಲ್ಲಿ ಎರಡು ಹಂತದ ಚುನಾವಣೆ ನಡೆಸುತ್ತಿದ್ದಾರೆ. ಚುನಾವಣೆ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಾರೆ. ರಾಜ್ಯವನ್ನ ಆರ್‌ಎಸ್‌ಎಸ್ ಪ್ರಯೋಗಾಲಯ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಅದು ವರ್ಕೌಟ್ ಆಗಲಿಲ್ಲ. ಪ್ಲಾನ್ ವಿಫಲವಾಗಿದೆ ಎಂದರು.
ಇದೇ ವೇಳೆ, ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ. ಟ್ರಬಲ್ ಇಂಜಿನ್ ಸರ್ಕಾರ ಎಂದು ವ್ಯಂಗ್ಯವಾಡಿದ ಪ್ರೀಯಾಂಕ್ ಖರ್ಗೆ, ಪಿಎಸ್ಐ ಹಗರಣ, ಗಂಗಾ ಕಲ್ಯಾಣ ಸ್ಕ್ಯಾಮ್ ಬಗ್ಗೆ ಚರ್ಚೆಗೆ ಬರ್ತಾರಾ? ಅಥವಾ ಸಿಎಂ ಖುರ್ಚಿ ಮಾರಾಟವಾಗ್ತಿದೆ ಎಂದು ಯತ್ನಾಳ ಹೇಳಿಕೆ ವಿಚಾರವಾಗಿ ಚರ್ಚೆಗೆ ಬರ್ತಾರಾ ಎಂದು ಸವಾಲು ಹಾಕಿದರು.
ಬ್ರ್ಯಾಂಡ್ ಬೆಂಗಳೂರು ಹೆಸರು ಮಾಯ:ಸರ್ಕಾರಗಳ ಕಾರ್ಯವೈಖರಿಯಿಂದ ಬ್ರ್ಯಾಂಡ್ ಬೆಂಗಳೂರು ಎಂಬ ಹೆಸರು ಅಳಿಸಿಹೋಗ್ತಿದೆ. ರಾಜಕ್ಕೆ ಬಂದು ಕೇವಲ ಉದ್ದೂದ್ದ ಭಾಷಣ ಕೊಟ್ಟು ಹೋದ್ರೆ ಕನ್ನಡಿಗರಿಗೆ ಉದ್ಯೋಗ ಸಿಗಲ್ಲ ಎಂದು ಮೋದಿ ಬರುವಿಕೆಗೆ ಟಾಂಗ್ ನೀಡಿದರು. ಕೋಲಿ ಸಮಾಜವನ್ನ ಎಸ್ಟಿಗೆ ಸೇರಿಸ್ತಿವಿ ಅಂತಾ ಹೇಳಿದ್ರು ಇದುವರೆಗೆ ಆಗಿಲ್ಲ. ಕೋಲಿ ಸಮಾಜವನ್ನ ಎಸ್ಟಿಗೆ ಸೇರಿಸುವ ಸಲುವಾಗಿ ಕೇಂದ್ರ ಸಚಿವರನ್ನ ಭೇಟಿ ಮಾಡಿದ್ದೇನೆ. ಆದರೆ ಈ ಬಗ್ಗೆ ಕೇಂದ್ರ/ರಾಜ್ಯ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.