ಕಲಬುರಗಿ: ಗುಜರಾತ್ ಗೆಲುವು ಮೋದಿ ಸಾಧನೆಯ ಗೆಲುವಲ್ಲ. 27 ವರ್ಷಗಳಿಂದ ಮನಿ, ಮಸಲ್ ಮತ್ತು ಮೋದಿ ಪ್ರಭಾವ ಅಲ್ಲಿ ಕೆಲಸ ಮಾಡಿದೆ. ಮತದಾರರಿಗೆ ಹೆದರಿಸಿ, ಹಣ ಖರ್ಚು ಮಾಡಿ ಪ್ರಭಾವ ಬೀರಿ ಗೆದ್ದು ಬಂದಿದ್ದಾರೆಯೇ ಹೊರತಾಗಿ ಅಭಿವೃದ್ಧಿ ಹೆಸರಲ್ಲಿ ಗೆಲ್ಲಲು ಅವರಿಗೆ ಸಾಧ್ಯವಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಗುಜರಾತ್‌ನಲ್ಲಿ 80 ಸೀಟ್ ಬರುವ ನಿರೀಕ್ಷೆ ನಮ್ಮದಿತ್ತು. ಆದರೆ ನಿರೀಕ್ಷೆಗಿಂತ ಕಡಿಮೆ ಸಾಧನೆ ಆಗಿದೆ. ಲೀಡ್ ನೋಡಿಕೊಂಡು ಪಕ್ಷ ಸಂಘಟನೆಯಲ್ಲಿ ಏನು ತಪ್ಪಾಗಿದೆ, ಹೇಗೆ ಸರಿಪಡಿಸಬೇಕು ಎಂದು ಯೋಚನೆ ಮಾಡುತ್ತೇವೆ. ಗುಜರಾತ್ ಮತ್ತು ಯುಪಿ ಬಿಟ್ಟರೆ ಉಳಿದ ಕಡೆಗಳಲ್ಲಿ ಬಿಜೆಪಿಯವರು ಕುದುರೆ ವ್ಯಾಪಾರ ಮಾಡಿಯೇ ಅಧಿಕಾರಕ್ಕೆ ಬಂದಿದ್ದಾರೆ. ನಾವು ಸೈದ್ದಾಂತಿಕವಾಗಿ ನಡೆಯುತ್ತೇವೆ ಎಂದರು.