ಕರ್ನಾಟಕ

karnataka

ETV Bharat / state

ಪ್ರಿಯಾಂಕ್ ಖರ್ಗೆ ನಾಪತ್ತೆ ಪೋಸ್ಟರ್ ಅಳವಡಿಕೆ​​ : ಕೆರಳಿದ ಅಭಿಮಾನಿಗಳಿಂದ ಪ್ರತಿಭಟನೆ - ಈಟಿವಿ ಭಾರತ ಕನ್ನಡ

ಚಿತ್ತಾಪುರ ಶಾಸಕ ಪ್ರಿಯಾಂಕ್​ ಖರ್ಗೆ ನಾಪತ್ತೆ ಪೋಸ್ಟರ್​ನ್ನು ಚಿತ್ತಾಪುರ ನಗರದ ವಿವಿಧೆಡೆ ಅಳವಡಿಸಲಾಗಿದ್ದು, ಈ ಬಗ್ಗೆ ಖರ್ಗೆ ಅಭಿಮಾನಿಗಳು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

Etv mla-priayanka-kharge-missing-poster-at-chitthapura
ಪ್ರಿಯಾಂಕ್ ಖರ್ಗೆ ನಾಪತ್ತೆ ಪೋಸ್ಟರ್ ಅಳವಡಿಕೆ​​ : ಕೆರಳಿದ ಅಭಿಮಾನಿಗಳಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ

By

Published : Nov 8, 2022, 3:48 PM IST

ಕಲಬುರಗಿ: 'ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕ್ಷೇತ್ರಕ್ಕೆ ಬಾರದೆ ಕಾಣೆಯಾಗಿದ್ದಾರೆ. ಆ ವ್ಯಕ್ತಿ ಎಲ್ಲಾದ್ರೂ ಕಂಡುಬಂದ್ರೆ ಚಿತ್ತಾಪುರಕ್ಕೆ ಭೇಟಿ ನೀಡುವಂತೆ ತಿಳಿಸಿ'.. ಹೀಗೊಂದು ಪೋಸ್ಟರ್​​ನ್ನು ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ವಿವಿಧೆಡೆ ಅಂಟಿಸಲಾಗಿದೆ.

'ಕಳೆದ ಒಂದೂವರೆ ತಿಂಗಳಿನಿಂದ ಪ್ರಿಯಾಂಕ್ ಖರ್ಗೆ ನಾಪತ್ತೆಯಾಗಿದ್ದಾರೆ. ಕೊನೆಯ ಬಾರಿ ಅಕ್ಟೋಬರ್ 18 ರಂದು ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ವ್ಯಕ್ತಿ ಎಲ್ಲಾದ್ರು ಕಾಣಿಸಿಕೊಂಡರೆ ಕ್ಷೇತ್ರಕ್ಕೆ ಭೇಟಿ ನೀಡುವಂತೆ ತಿಳಿಸಿ ಎಂದು ಪೊಸ್ಟರ್ ನಲ್ಲಿ ಬರೆಯಲಾಗಿದೆ. ಕೊನೆಯಲ್ಲಿ ಪ್ರಕಟಣೆ, ಅರವಿಂದ ಚೌವ್ಹಾಣ್ ಬಿಜೆಪಿ ಮುಖಂಡರು ಚಿತ್ತಾಪುರ' ಎಂದು ಪೋಸ್ಟರ್ ನಲ್ಲಿದೆ.

ಇನ್ನು, ಈ ಪೋಸ್ಟರ್ ನೋಡಿದ ಶಾಸಕ ಪ್ರಿಯಾಂಕ್ ಖರ್ಗೆ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೆರಳಿದ್ದಾರೆ. ಈ ಬಗ್ಗೆ ಚಿತ್ತಾಪುರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಬಿಜೆಪಿ ಮುಖಂಡ ಅರವಿಂದ್ ಚೌವ್ಹಾಣ್‌ರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಪೊಲೀಸರು ಮಧ್ಯೆ ಪ್ರವೇಶ ಮಾಡಿ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಬಂಧಿಸುವುದಾಗಿ ಹೇಳಿದ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದಾರೆ.

ಇದನ್ನೂ ಓದಿ :ಕಾಂಗ್ರೆಸ್ ನಾಯಕರಿಗೆ ಹಿಂದೂ ಪದವೇ ಅಲರ್ಜಿ: ಜಗದೀಶ್ ಶೆಟ್ಟರ್

For All Latest Updates

TAGGED:

ABOUT THE AUTHOR

...view details