ಕಲಬುರಗಿ: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ತಮ್ಮ ಹುಟ್ಟುಹಬ್ಬವನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಹುತಾತ್ಮ ಗುರು ಕುಟುಂಬಕ್ಕೆ ಆರ್ಥಿಕ ನೆರವು... ಶಾಸಕನಿಂದ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ - ವಿಧಾನಸಭಾ
ಆಡಂಬರದ ಕಾರ್ಯಕ್ರಮ ನಡೆಸದೆ, ಅದೇ ಹಣವನ್ನು ಹುತಾತ್ಮ ಯೋಧನ ಕುಟುಂಬಕ್ಕೆ ನೀಡಿದ್ದಾರೆ. ಶರಣಬಸವೇಶ್ವರರ ಸ್ಮರಣಿಕೆ ಜೊತೆಗೆ 3.40 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿ ದತ್ತಾತ್ರೇಯ ಪಾಟೀಲ್ ರೇವೂರ, ಹುತಾತ್ಮ ಯೋಧನ ಕುಟುಂಬದಿಂದ ಆಶೀರ್ವಾದ ಪಡೆದರು.
ರೇವೂರ ಅವರು ಹುತಾತ್ಮ ಯೋಧ ಮಂಡ್ಯದ ಗುರು ಮಡಿವಾಳ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಬರ್ತಡೇ ಆಚರಿಸಿಕೊಂಡರು. ದಿ.ಚಂದ್ರಶೇಖರ ಪಾಟೀಲ್ ರೇವೂರ ಅಭಿಮಾನಿ ಬಳಗದಿಂದ ನಗರದ ಸೂಪರ್ ಮಾರುಕಟ್ಟೆಯಲ್ಲಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿತ್ತು.
ಆಡಂಬರದ ಕಾರ್ಯಕ್ರಮ ನಡೆಸದೆ, ಅದೇ ಹಣವನ್ನು ಹುತಾತ್ಮ ಯೋಧನ ಕುಟುಂಬಕ್ಕೆ ನೀಡಿದ್ದಾರೆ. ಶರಣಬಸವೇಶ್ವರರ ಸ್ಮರಣಿಕೆ ಜೊತೆಗೆ 3.40 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿ ದತ್ತಾತ್ರೇಯ ಪಾಟೀಲ್ ರೇವೂರ, ಹುತಾತ್ಮ ಯೋಧನ ಕುಟುಂಬದಿಂದ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.