ಕರ್ನಾಟಕ

karnataka

ETV Bharat / state

ವಿದ್ಯಾರ್ಥಿನಿ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ: ಗರ್ಭಪಾತ ಮಾಡಿಸುವಾಗ ಸಾವು ಶಂಕೆ, ಪ್ರಿಯಕರ ಅರೆಸ್ಟ್​ - ಪ್ರಿಯಕರನ ವಿರುದ್ಧ ಕೊಲೆ ಆರೋಪ

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಟ್ಟ ಶವವಾಗಿ ಪತ್ತೆಯಾಗಿದ್ದು, ಆಕೆಯ ಪ್ರಿಯಕರನೇ ಕೊಲೆ ಮಾಡಿ ಸುಟ್ಟು ಹಾಕಿದ್ದಾನೆ ಎಂದು ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರು ಅರೋಪಿಸಿದ್ದಾರೆ.

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ...!

By

Published : Sep 10, 2019, 5:24 PM IST

ಕಲಬುರಗಿ :ಜಿಲ್ಲೆಯ ಗಡಿ ಭಾಗ ಹಾಗೂ ಕರ್ನಾಟಕ ತೆಲಂಗಾಣ ಗಡಿಯಲ್ಲಿರುವ ಪರಗಿ ಗ್ರಾಮದ ಬಳಿ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದ್ದು, ಆಕೆಯನ್ನು ಕೊಲೆ ಮಾಡಿ ಸುಟ್ಟು ಹಾಕಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಯುವತಿಯ ಪ್ರಿಯಕರ ರಾಜಾಪುರದ ರವಿ ಪೂಜಾರಿ ಎಂಬಾತ ಸುಟ್ಟು ಹಾಕಿದ್ದಾನೆಂದು ಆರೋಪಿಸಲಾಗಿದೆ. ಸದ್ಯ ರವಿ ಪೂಜಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಆರೋಪಿ ರವಿ ಪೂಜಾರಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು,ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ಏರ್ಪಟ್ಟಿತ್ತು. ಇದರ ಫಲವಾಗಿ ಆಕೆ ಗರ್ಭಿಣಿಯಾಗಿದ್ದಳು. ಇದರಿಂದ ಗರ್ಭಪಾತಕ್ಕೆ ಮುಂದಾಗಿದ್ದು,ಗರ್ಭಪಾತ ಮಾಡಿಸುವ ವೇಳೆ ಆಕೆ ಮೃತಪಟ್ಟಳು. ಹೀಗಾಗಿ ಆಕೆಯ ಶವವನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿ ತೆಲಂಗಾಣ ಗಡಿ ಪರಗಿಯಲ್ಲಿ ಸುಟ್ಟು ಹಾಕಿರೋದಾಗಿ ಆರೋಪಿ ರವಿ ಮಾಹಿತಿ ನೀಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಮಗಳು ನಾಪತ್ತೆಯಾಗಿದ ಹಿನ್ನಲೆ ಆಕೆಯ ಪೊಷಕರು ದೂರು ನೀಡಿದ್ದಾರೆ. ಇದೀಗ ಆಕೆ ಶವವಾಗಿ ಪತ್ತೆಯಾಗಿರುವುದಕ್ಕೆ ಆಕ್ರಂದನ ಮುಗಿಲು ಮುಟ್ಟಿದ್ದು, ಅಲ್ಲದೇ ರವಿಯೇ ಕೊಲೆಗಾರ ಎಂದು ಆರೋಪಿಸಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

...view details