ಕರ್ನಾಟಕ

karnataka

ETV Bharat / state

'ಯಡಿಯೂರಪ್ಪ ಸಿಎಂ ಆಗಲೆಂದು ನನ್ನ ಬಿಜೆಪಿಗೆ ಕರೆತಂದಿದ್ದೇ ಈಶ್ವರಪ್ಪ, ಶಿವಮೊಗ್ಗದವರ ಜಗಳ ಜಾಸ್ತಿಯಾಗಿದೆ' - ಸಚಿವ ವಿ ಸೋಮಣ್ಣ

ಯಡಿಯೂರಪ್ಪ ಏನು ಮಾಡಿದಾರೆ.? ಈಶ್ವರಪ್ಪ ಏನು ಹೇಳಿದಾರೆ.? ಅನ್ನೋದೆಲ್ಲಾ 17ರ ನಂತರ ಸಚಿವ ಸಂಪುಟದಲ್ಲಿ ಚರ್ಚಿಸುವೆ..

minister-v-somanna
ಸಚಿವ ವಿ.ಸೋಮಣ್ಣ

By

Published : Apr 3, 2021, 5:10 PM IST

ಕಲಬುರಗಿ :ಶಿವಮೊಗ್ಗದವರ ಜಗಳ ಒಂದು ಹೆಜ್ಜೆ ಜಾಸ್ತಿಯಾಗಿದೆ. ಇದು ಸರಿಯಲ್ಲ ಅನ್ನೋದು ನನ್ನ ವೈಯಕ್ತಿಕ ಭಾವನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ, ಈಶ್ವರಪ್ಪ ಇಬ್ಬರು ಶಿವಮೊಗ್ಗದವರೇ.. ಈಶ್ವರಪ್ಪನವರು ಅನುಭವಿಗಳು ಹಿರಿಯರು. ಯಡಿಯೂರಪ್ಪ ಸಿಎಂ ಆಗಬೇಕು ಅಂತ ನನಗೂ ಬಿಜೆಪಿಗೆ ಕರೆದುಕೊಂಡು ಬಂದಿದ್ದೇ ಈಶ್ವರಪ್ಪ ಎಂದರು.

ಈಶ್ವರಪ್ಪ-ಬಿಎಸ್​​ವೈ ಮುನಿಸು ಕುರಿತು ವಿ.ಸೋಮಣ್ಣ ಪ್ರತಿಕ್ರಿಯೆ

ಇದನ್ನು ಸರಿಪಡಿಸುವ ಕೆಲಸ ಅಧ್ಯಕ್ಷರು ಮಾಡ್ತಾರೆ. ಈಶ್ವರಪ್ಪ ಹಿರಿಯರು, ನನಗಿಂತ ಬುದ್ಧಿವಂತರು ಅವರಿಗೆ ಈಗ ಯಾಕಾಗಿ ನೋವಾಗಿದೆ ಗೊತ್ತಿಲ್ಲ. ಇದೆಲ್ಲ ಬಹಳ‌ ಸಲ‌ ಆಗಿರುವಂತದ್ದು. ಈಶ್ವರಪ್ಪನವರು ಈಗ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ.

ಯಡಿಯೂರಪ್ಪ ಏನು ಮಾಡಿದಾರೆ.? ಈಶ್ವರಪ್ಪ ಏನು ಹೇಳಿದಾರೆ.? ಅನ್ನೋದೆಲ್ಲಾ 17ರ ನಂತರ ಸಚಿವ ಸಂಪುಟದಲ್ಲಿ ಚರ್ಚಿಸುವೆ ಎಂದರು.

ಇದನ್ನೂ ಓದಿ:ನಮ್ಮಲ್ಲಿ ಹೊಗೆ ಶುರುವಾಗಿದೆ ಅಷ್ಟೇ, ಕಾಂಗ್ರೆಸ್​ನಲ್ಲಿ ಬೆಂಕಿಯೇ ಬಿದ್ದಿದೆ: ಕಟೀಲ್ ವ್ಯಂಗ್ಯ

ABOUT THE AUTHOR

...view details