ಕರ್ನಾಟಕ

karnataka

ETV Bharat / state

ನಿರಾಣಿ ಸಿಎಂ ಆಗಬೇಕು ಅಂತಾ ನಾನು ಹೇಳಿದ್ದು ಈ‌ ಅವಧಿಗಲ್ಲ : ಸಚಿವ ಕೆ ಎಸ್‌ ಈಶ್ವರಪ್ಪ ಸ್ಪಷ್ಟನೆ - ಮುರುಗೇಶ್ ನಿರಾಣಿ

ಈ ಅವಧಿ ಮುಗಿಯೋವರೆಗೆ ಬೊಮ್ಮಾಯಿ ಅವರೇ ಸಿಎಂ ಆಗಿರುತ್ತಾರೆ. ಮುಂದಿನ ಬಾರಿ ಯಾರು ಸಿಎಂ ಆಗಬೇಕು ಅಂತಾ ಹೈಕಮಾಂಡ್ ನಿರ್ಧಾರ ಮಾಡುತ್ತದೆ‌‌. ನಾನು ಸಿಎಂ ಆಗಬೇಕು ಅಂತಾ ಯಾವತ್ತು ಕನಸು ಕಂಡಿಲ್ಲ. ಪಕ್ಷ ಕೊಟ್ಟಿರೋ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ..

ಸಚಿವ ಈಶ್ವರಪ್ಪ
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ

By

Published : Nov 30, 2021, 4:01 PM IST

ಕಲಬುರಗಿ :ನಾನು ಮುರುಗೇಶ್ ನಿರಾಣಿ ಸಿಎಂ ಆಗಬೇಕು ಅಂತಾ ಹೇಳಿದ್ದು ಈ‌ ಅವಧಿಯಲ್ಲಿ ಅಲ್ಲ, ಮುಂದಿನ ದಿನದಲ್ಲಿ ನಿರಾಣಿ ಸಿಎಂ ಆಗಬೇಕು ಅಂತಾ ಹೇಳಿದ್ದೇನೆ ಅಷ್ಟೇ.. ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ ಎಸ್‌ ಈಶ್ವರಪ್ಪ ಸ್ಪಷ್ಟನೆ ನೀಡಿದರು.

ಸಿಎಂ ಬದಲಾವಣೆ ಕುರಿತಂತೆ ಸಚಿವ ಕೆ ಎಸ್‌ ಈಶ್ವರಪ್ಪ ಸ್ಪಷ್ಟನೆ ನೀಡಿರುವುದು..

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಆಗೋ ತಿರುಕನ ಕನಸು‌ ಯಾರು ಕಾಣಬಾರದು ಅಂತಾ ಸಚಿವ ಆರ್ ಅಶೋಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಅಶೋಕ್ ಹೇಳಿದ್ದು ಬಿಜೆಪಿಯವರಗಲ್ಲ, ಕಾಂಗ್ರೆಸ್‌ನವರಿಗೆ. ಕಾಂಗ್ರೆಸ್‌ನಲ್ಲಿ ಪಂಚ‌ ಕೌರವರು ಸಿಎಂ ಕನಸು ಕಾಣುತ್ತಿದ್ದಾರೆ.

ಪ್ರತಿಯೊಬ್ಬರು ತಾವೇ ಸಿಎಂ ಅಂತಾ ಹೇಳಿಕೊಂಡು ತಿರಗುತ್ತಿದ್ದಾರೆ. ನಾನು ನಿರಾಣಿ ಸಿಎಂ ಆಗಬೇಕು ಅಂತಾ ಹೇಳಿದ್ದು ಈ‌ ಅವಧಿಯಲ್ಲಿ ಅಲ್ಲ, ಮುಂದಿನ ದಿನದಲ್ಲಿ ನಿರಾಣಿ ಸಿಎಂ ಆಗಬೇಕು ಅಂತಾ ಹೇಳಿದ್ದೇನೆ ಹೊರತು ಈ ಅವಧಿಗೆ ಅಲ್ಲ.

ಈ ಅವಧಿ ಮುಗಿಯೋವರೆಗೆ ಬೊಮ್ಮಾಯಿ ಅವರೇ ಸಿಎಂ ಆಗಿರುತ್ತಾರೆ. ಮುಂದಿನ ಬಾರಿ ಯಾರು ಸಿಎಂ ಆಗಬೇಕು ಅಂತಾ ಹೈಕಮಾಂಡ್ ನಿರ್ಧಾರ ಮಾಡುತ್ತದೆ‌‌. ನಾನು ಸಿಎಂ ಆಗಬೇಕು ಅಂತಾ ಯಾವತ್ತು ಕನಸು ಕಂಡಿಲ್ಲ. ಪಕ್ಷ ಕೊಟ್ಟಿರೋ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದರು‌.

ಯಡಿಯೂರಪ್ಪ ಹುಲಿ :ಯಡಿಯೂರಪ್ಪ ಸೈಡ್‌ಲೈನ್ ವಿಚಾರದ ಕುರಿತು ಮಾತನಾಡಿದ ಅವರು, ಯಾರೋ ಕೆಲ ತಲೆಹರಟೆಗಳಿಗೆ ಆ ರೀತಿಯ ಭಾವನೆ ಬಂದಿದೆ. ಯಡಿಯೂರಪ್ಪ ಹುಲಿ ಇದ್ದ ಹಾಗೆ. ಹುಲಿಗೆ ಯಾವುದೇ ಸ್ಥಾನಮಾನದ ಅವಶ್ಯಕತೆ ಇಲ್ಲ ಎಂದಿದ್ದಾರೆ.

ABOUT THE AUTHOR

...view details