ಕಲಬುರಗಿ:ಬೇವಿನ ಮರದಿಂದ ಹಾಲಿನ ರೂಪದ ಅಂಟು ದ್ರವ ಸುರಿಯುತ್ತಿದೆ. ಇದು ಎಲ್ಲ ಬೇವಿನ ಮರಗಳಲ್ಲೂ ಸಾಮಾನ್ಯ.ಆದರೆ, ಇದು ದೈವಲೀಲೆ ಎಂದು ಅಫಜಲಪುರ ತಾಲೂಕಿನ ಕೊಳ್ಳೂರ ಗ್ರಾಮದ ಜನ ಮೌಢ್ಯಕ್ಕೆ ಶರಣಾಗಿ ಬೇವಿನ ಮರಕ್ಕೆ ಪೂಜೆ ಮಾಡುತ್ತಿದ್ದಾರೆ.
ಬೇವಿನ ಮರದಿಂದ ದ್ರವ ಸುರಿದ್ರೆ.. ದೈವಲೀಲೆ ಹೇಗಾಗುತ್ತೆ.. ಮೌಢ್ಯದಿಂದ ಬುದ್ಧಿಗೆ ಮಂಕು! - ಅಫಜಲಪುರ ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ಬೇವಿನ ಮರದಿಂದ ಸುರಿದ ಹಾಲು
ಮಹಾದೇವಪ್ಪ ಇದು ಒಳೀತೋ ಕೆಡುಕೋ ಅಂತಾ ಕೇಳೋದಕ್ಕೆ ಮಠಗಳು, ಜ್ಯೋತಿಷಿಗಳ ತಿರುಗಿದ್ದಾರೆ. ಅದಕ್ಕಾಗಿಯೇ ₹50 ಸಾವಿರ ಹಣ ಖರ್ಚು ಮಾಡಿದ್ದಾರಂತೆ. ರಸಾಂಕುರಗಳು ಗಾಳಿಗೆ ಸಂಯೋಗವಾಗಿ ಅಂಟು ಆಗುವ ಪ್ರಕ್ರಿಯೆಯಲ್ಲಿ ತೊಡಗಿದಾಗ, ಸ್ವಲ್ಪ ವ್ಯತ್ಯಾಸವಾದರೂ ಅಂಟು ಆಗುವ ಬದಲು ಬಿಳಿ ದ್ರವ ರೂಪದಲ್ಲಿ ನೊರೆಯಾಗಿ ಹೊರಹೊಮ್ಮುತ್ತದೆ ಅಂತಾರೆ ಪರಿಣಿತರು
ಮಹಾದೇವಪ್ಪ ತಳವಾರ ಎಂಬ ರೈತನ ಜಮೀನಿನಲ್ಲಿ ಕಳೆದ 15 ದಿನದಿಂದ ಬೇವಿನ ಮರದಿಂದ ಬಿಳಿ ಬಣ್ಣದ ದ್ರವ ಸುರಿಯುತ್ತಿದೆ. ಇದು ದೈವಿಶಕ್ತಿ ಎಂದು ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಮರದ ಕೆಳಗೆ ವಿಶೇಷ ಪೂಜೆ ಮಾಡುತ್ತಿದ್ದಾರೆ. ಆ ದ್ರವ ಕುಡಿದು ಮೌಢ್ಯಕ್ಕೆ ಶರಣಾಗುತ್ತಿದ್ದಾರೆ.
ಮಹಾದೇವಪ್ಪ ಇದು ಒಳೀತೋ ಕೆಡುಕೋ ಅಂತಾ ಕೇಳೋದಕ್ಕೆ ಮಠಗಳು, ಜ್ಯೋತಿಷಿಗಳ ತಿರುಗಿದ್ದಾರೆ. ಅದಕ್ಕಾಗಿಯೇ ₹50 ಸಾವಿರ ಹಣ ಖರ್ಚು ಮಾಡಿದ್ದಾರಂತೆ.ರಸಾಂಕುರಗಳು ಗಾಳಿಗೆ ಸಂಯೋಗವಾಗಿ ಅಂಟು ಆಗುವ ಪ್ರಕ್ರಿಯೆಯಲ್ಲಿ ತೊಡಗಿದಾಗ, ಸ್ವಲ್ಪ ವ್ಯತ್ಯಾಸವಾದರೂ ಅಂಟು ಆಗುವ ಬದಲು ಬಿಳಿ ದ್ರವ ರೂಪದಲ್ಲಿ ನೊರೆಯಾಗಿ ಹೊರಹೊಮ್ಮುತ್ತದೆ ಅಂತಾರೆ ಪರಿಣಿತರು.