ಕಲಬುರಗಿಯಿಂದ ತಮ್ಮ ರಾಜ್ಯಗಳಿಗೆ ಕಾಲ್ನಡಿಗೆಯಲ್ಲೇ ಹೊರಡಲು ಮುಂದಾದ ವಲಸೆ ಕಾರ್ಮಿಕರು! - ಕಾಲ್ನಡಿಗೆ
ಕಲಬುರಗಿಯಲ್ಲಿ ವಾಸವಿದ್ದ ಬಿಹಾರ ಹಾಗೂ ರಾಜಸ್ಥಾನ ಮೂಲದ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ತಮ್ಮ ರಾಜ್ಯಗಳಿಗೆ ತೆರಳಲು ಮುಂದಾಗಿದ್ದಾರೆ.
![ಕಲಬುರಗಿಯಿಂದ ತಮ್ಮ ರಾಜ್ಯಗಳಿಗೆ ಕಾಲ್ನಡಿಗೆಯಲ್ಲೇ ಹೊರಡಲು ಮುಂದಾದ ವಲಸೆ ಕಾರ್ಮಿಕರು! migrant labours problem in kalaburgi](https://etvbharatimages.akamaized.net/etvbharat/prod-images/768-512-7131852-thumbnail-3x2-kala.jpg)
ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕರು
ಕಲಬುರಗಿ: ಜಿಲ್ಲೆಯಲ್ಲಿದ್ದ ರಾಜಸ್ಥಾನ, ಬಿಹಾರ ಕಾರ್ಮಿಕರು ಸಾರಿಗೆ ವ್ಯವಸ್ಥೆ ಇಲ್ಲದೆ ಅನಿವಾರ್ಯವಾಗಿ ಕಾಲ್ನಡಿಗೆಯಲ್ಲಿಯೇ ತಮ್ಮೂರು ಸೇರಲು ಮುಂದಾಗಿದ್ದಾರೆ.
ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕರು
ಇನ್ನು ರಾಜಸ್ಥಾನ ಮೂಲದ ಸುಮಾರು 150ಕ್ಕೂ ಹೆಚ್ಚು ಕಾರ್ಮಿಕರು ತಮ್ಮೂರಿಗೆ ತೆರಳಲು ಹಾತೊರೆಯುತ್ತಿದ್ದಾರೆ. ಈಗಾಗಲೇ ಸೇವಾ ಸಿಂಧು ಆನ್‌ಲೈನ್ ಪ್ರಕ್ರಿಯೆ ಮೂಲಕ 60 ಕಾರ್ಮಿಕರು ತಮ್ಮೂರಿಗೆ ತೆರಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದ್ರೆ ಜಿಲ್ಲಾಡಳಿತ ತಮಗೆ ಊರಿಗೆ ತೆರಳಲು ಸೂಕ್ತ ಸೌಲಭ್ಯ ಒದಗಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆಯೇ ಹೊರತು ತಮಗೆ ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸುತ್ತಿಲ್ಲ. ಹೀಗಾದರೆ ಅನಿವಾರ್ಯವಾಗಿ ಮಕ್ಕಳ ಸಮೇತ ಕಾಲ್ನಡಿಗೆಯಲ್ಲಿ ಊರಿಗೆ ತೆರಳಬೇಕಾಗಲಿದೆ. ತಕ್ಷಣ ಸರ್ಕಾರ ತಮ್ಮ ಕಷ್ಟಕ್ಕೆ ಸ್ಪಂದಿಸಲಿ ಎಂದು ಅವಲತ್ತುಕೊಂಡಿದ್ದಾರೆ.