ಸೇಡಂ (ಕಲಬುರಗಿ):ಪಟ್ಟಣದ ಸಣ್ಣ ಅಗಸಿ ಹಾಗೂ ರಂಜೋಳ ಗ್ರಾಮದಲ್ಲಿ ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸೇಡಂ: ಮಧ್ಯರಾತ್ರಿಯೇ ಧ್ವಜಾರೋಹಣ ನೆರವೇರಿಸಿದ ಪಿಎಸ್ಐ - Sedam latest news
ಕಲಬುರಗಿಯ ಸೇಡಂ ಪಟ್ಟಣದ ಸಣ್ಣ ಅಗಸಿ ಹಾಗೂ ರಂಜೋಳ ಗ್ರಾಮದಲ್ಲಿ ಮಧ್ಯರಾತ್ರಿಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
![ಸೇಡಂ: ಮಧ್ಯರಾತ್ರಿಯೇ ಧ್ವಜಾರೋಹಣ ನೆರವೇರಿಸಿದ ಪಿಎಸ್ಐ ಸ್ವಾತಂತ್ರ್ಯ ದಿನಾಚರಣೆ](https://etvbharatimages.akamaized.net/etvbharat/prod-images/768-512-04:18:01:1597488481-ka-sdm-02-midnight-flaghosting-in-sedam-kac10021-15082020142849-1508f-1597481929-610.jpg)
ಸ್ವಾತಂತ್ರ್ಯ ದಿನಾಚರಣೆ
ಸಣ್ಣ ಅಗಸಿ ಬಡಾವಣೆಯಲ್ಲಿ ಪ್ರತಿವರ್ಷವೂ ಮಧ್ಯರಾತ್ರಿ ಧ್ವಜಾರೋಹಣ ಮಾಡುವ ಪದ್ಧತಿಯಿದೆ. ಹಾಗಾಗಿ, ಶುಕ್ರವಾರ ರಾತ್ರಿಯೇ ಪಿಎಸ್ಐ ಸುಶೀಲ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.
ಈ ವೇಳೆ ಹಿರಿಯ ಸಾಹಿತಿ, ಪತ್ರಕರ್ತ ಮಹಿಪಾಲ ರೆಡ್ಡಿ ಮುನ್ನೂರು ಮಾತನಾಡಿ, ಭಾರತೀಯರು ಸ್ವತಂತ್ರರಾಗಿ ಜೀವಿಸಲು ಅನೇಕ ಹೋರಾಟಗಾರರ ಅವಿರತ ಶ್ರಮ, ತ್ಯಾಗವೇ ಕಾರಣ. ಅಂತಹ ಪವಿತ್ರ ದಿನದಂದು ಮಹನೀಯರನ್ನು ನೆನೆಯುವ ಅವಶ್ಯಕತೆ ಇದೆ ಎಂದು ಹೇಳಿದರು.
Last Updated : Aug 15, 2020, 7:09 PM IST