ಕಲಬುರಗಿ: ಕೆಲಸ ಇಲ್ಲದೆ ಜನ ಗೂಳೆ ಹೋಗಬಾರದು ಅನ್ನೋ ಕಾರಣಕ್ಕೆ ಸರ್ಕಾರ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಆದ್ರೆ ಯೋಜನೆ ವರವಾಗುವ ಬದಲು ಗ್ರಾಮದ ರಾಜಕೀಯ ಮುಖಂಡರ ನಡುವಿನ ವೈಯಕ್ತಿಕ ತಿಕ್ಕಾಟದಿಂದಾಗಿ ಕೆಲಸ ಸಿಗದೆ ಜನ ವಂಚಿತರಾಗುತ್ತಿದ್ದಾರೆ.
ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮ ಪಂಚಾಯತ್ನಿಂದ ಸಮರ್ಪಕವಾಗಿ ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿಲ್ಲ, ಗ್ರಾ.ಪಂ ಅಧಿಕಾರಿಗಳು ಎನ್‌ಎಂಆರ್ ತೆಗೆಯದೆ ತೊಂದರೆ ನೀಡುತ್ತಿದ್ದಾರೆ ಅಂತ ಕಾರ್ಮಿಕರು ಆರೋಪಿಸಿದ್ದಾರೆ.
ಊರಿನ ರಾಜಕೀಯ ಮುಖಂಡರ ಒತ್ತಡದಿಂದ ಅಧಿಕಾರಿಗಳು ಕೆಲವರ ಎನ್‌ಎಂಆರ್ ತೆಗೆದರೆ, ಇನ್ನೂ ಹಲವರು ಎನ್ಎಂಆರ್ ತೆಗೆಯುತ್ತಿಲ್ಲ, ಒಬ್ಬರು ಕೆಲಸಕ್ಕೆ ಹೋಗಿ ಎಂದು ಆದೇಶ ನೀಡುತ್ತಿದ್ದಾರೆ. ಇನ್ನೂ ಕೆಲವರು ಅವರಿಗೆ ಕೆಲಸ ಹೇಗೆ ಕೊಟ್ಟಿರಿ ಎಂದು ತಗಾದೆ ತೆಗೆಯುತ್ತಿದ್ದಾರೆ. ಕೆಲವರಿಗೆ ಕೆಲಸ ಕೊಟ್ಟು ಇನ್ನೂ ಹಲವರಿಗೆ ಕೆಲಸದಿಂದ ಹೊರಗಿಡುವ ಅಧಿಕಾರಿಗಳ ಕ್ರಮವೂ ಕೂಡ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.