ಕಲಬುರಗಿ :ಇತ್ತೀಚೆಗಷ್ಟೇ ಕೆಸರಟಗಿ ಎಸ್ಐಸಿ ಕೇಂದ್ರದಲ್ಲಿರುವ ಕೋವಿಡ್ ಸೋಂಕಿತರು ಅಲ್ಲಿನ ಅವ್ಯವಸ್ಥೆಯ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಇದೀಗ ಜಿಮ್ಸ್ ಆಸ್ಪತ್ರೆಯಲ್ಲಿರುವ ಕೋವಿಡ್ ಸೋಂಕಿತರು ಕೂಡ ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.
ಜಿಮ್ಸ್ ಕೋವಿಡ್ ಕೇಂದ್ರದಲ್ಲಿ ಅವ್ಯವಸ್ಥೆ : ಸೋಂಕಿತರ ಆರೋಪ - Mess in Kalburgi GIMS Covid Care Center
ಕಲಬುರಗಿಯ ಜಿಮ್ಸ್ ಕೋವಿಡ್ ಕೇರ್ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ.

ಜಿಮ್ಸ್ ಕೋವಿಡ್ ಕೇಂದ್ರದಲ್ಲಿ ಬಿಸಿ ನೀರು, ಉಪಹಾರ, ಚಹಾ ಯಾವುದೂ ಸರಿಯಾಗಿ ಕೊಡ್ತಿಲ್ಲ. ಬೆಳಗ್ಗೆ ಔಷಧಿ ಕೊಟ್ಟು ಹೋದ್ರೆ, ರಾತ್ರಿ ಬರ್ತಾರೆ. ಅಲ್ಲಿಯವರೆಗೆ ನಮ್ಮ ಆರೋಗ್ಯದಲ್ಲಿ ಏರುಪೇರಾದ್ರೆ ಕೇಳುವವರೇ ಇಲ್ಲ ಎಂದು ಸೋಂಕಿತರು ದೂರಿದ್ದಾರೆ.
ಸದ್ಯ, ಜಿಲ್ಲೆಯಲ್ಲಿ 1,426 ಸಕ್ರಿಯ ಪ್ರಕರಣಗಳಿವೆ. ಜಿಮ್ಸ್, ಇಎಸ್ಐ, ಬಸವೇಶ್ವರ, ಧನ್ವಂತರಿ ಆಸ್ಪತ್ರೆ ಹಾಗೂ ಮೂರು ಪ್ರಮುಖ ಐಸೋಲೇಶನ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಸ್‌ಎಆರ್‌ಐ (ಸಾರಿ) ಹಾಗೂ ಐಎಲ್ಐ (ವಿಷಮ ಶೀತ ಜ್ವರ ಹಾಗೂ ತೀವ್ರ ಉಸಿರಾಟ ಸಮಸ್ಯೆ) ಪ್ರಕರಣಗಳು ಹೆಚ್ಚಾಗುತ್ತಿವೆ. ಒಟ್ಟು 1,426 ಸೋಂಕಿತರ ಪೈಕಿ 862 ಜನರಿಗೆ ಎಸ್‌ಎಆರ್‌ಐ ಹಾಗೂ ಐಎಲ್ಐ ಸೋಂಕು ತಗುಲಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜಿಮ್ಸ್ನಲ್ಲಿ 276, ಇಎಸ್ಐನಲ್ಲಿ 119, ಎಸ್ಐಸಿ ಕೇಂದ್ರದಲ್ಲಿ 639 ರೋಗಿಗಳಿದ್ದಾರೆ.