ಕಲಬುರಗಿ:ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಕಲಬುರಗಿಯ ಜೆಡಿಎಸ್ ಕಚೇರಿಯಲ್ಲಿ ಅಭ್ಯರ್ಥಿ ಗೆಲ್ಲಿಸುವ ಕುರಿತು ಪೂರ್ವಬಾವಿ ಸಭೆ ನಡೆಸಲಾಯಿತು.
ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಸಮೀಪ...ಜೆಡಿಎಸ್ ಕಚೇರಿಯಲ್ಲಿ ಪೂರ್ವ ಬಾವಿ ಸಭೆ! - ಜೆಡಿಎಸ್ ಕಚೇರಿಯಲ್ಲಿ ಪೂರ್ವ ಬಾವಿ ಸಭೆ
ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಕಲಬುರಗಿಯ ಜೆಡಿಎಸ್ ಕಚೇರಿಯಲ್ಲಿ ಅಭ್ಯರ್ಥಿ ಗೆಲ್ಲಿಸುವ ಕುರಿತು ಪೂರ್ವ ಬಾವಿ ಸಭೆ ನಡೆಸಲಾಯಿತು.
![ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಸಮೀಪ...ಜೆಡಿಎಸ್ ಕಚೇರಿಯಲ್ಲಿ ಪೂರ್ವ ಬಾವಿ ಸಭೆ! meeting-at-jds-office-in-kalburgi](https://etvbharatimages.akamaized.net/etvbharat/prod-images/768-512-6267524-thumbnail-3x2-sanju.jpg)
ಜೆಡಿಎಸ್ ಪಕ್ಷದ ವತಿಯಿಂದ ಈಶಾನ್ಯ ಶಿಕ್ಷಕರ ಚುನಾವಣೆಗೆ ತಿಮ್ಮಯ್ಯ ಪುರ್ಲೆ ಅವರನ್ನು ಜೆಡಿಎಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರ ಮತ್ತು ಮುಖಂಡರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಅಭ್ಯರ್ಥಿಯ ಗೆಲ್ಲಿಸುವ ಕುರಿತು ಸಮಾಲೋಚನೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಕಲಬುರಗಿ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಅಭ್ಯರ್ಥಿ ತಿಮ್ಮಯ್ಯ ಪುರ್ಲೆಯವರನ್ನು ಈಶಾನ್ಯ ಶಿಕ್ಷಕರ ಚುನಾವಣೆಯಲ್ಲಿ ಗೆಲ್ಲಿಸುವ ಒಕ್ಕೂರಲಿನ ಪ್ರಯತ್ನ ಮಾಡಲಾಗುವುದು. ಇಂದಿನಿಂದ ಚುನಾವಣೆ ತಯಾರಿ ಆರಂಭವಾಗಲಿದೆ. ಚುನಾವಣೆ ಪ್ರಚಾರಕ್ಕೆ ಪಕ್ಷದ ವರಿಷ್ಠರಾದ ದೇವೆಗೌಡ್ರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಸೇರಿದಂತೆ ರಾಜ್ಯದ ಪ್ರಮುಖ ಮುಖಂಡರು ಪ್ರಚಾರ ಆಗಮಿಸಲಿದ್ದಾರೆ ಎಂದರು.