ಕರ್ನಾಟಕ

karnataka

ETV Bharat / state

ಸಿಎಎ, ಎನ್​ಆರ್​ಸಿ ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ - Medical students protest in Kalabari

ಕಲಬುರಗಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮುಖಕ್ಕೆ ನೋ ಸಿಎಎ, ನೋ ಎನ್​ಆರ್​ಸಿ ಎಂಬ ಮಾಸ್ಕ್ ಧರಿಸಿ ಸಿಎಎ, ಎನ್​ಆರ್​ಸಿ ವಿರೋಧಿಸಿ ಪ್ರತಿಭಟನೆ ನಡೆಸಿದರು.

protest
ಪ್ರತಿಭಟನೆ

By

Published : Jan 16, 2020, 1:40 PM IST

ಕಲಬುರಗಿ: ಸಿಎಎ, ಎನ್​ಆರ್​ಸಿ ವಿರೋಧಿಸಿ ಕಲಬುರಗಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮುಖಕ್ಕೆ ನೋ ಸಿಎಎ, ನೋ ಎನ್​ಆರ್​ಸಿ ಎಂಬ ಮಾಸ್ಕ್ ಧರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಸಿಎಎ, ಎನ್​ಆರ್​ಸಿ ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಕೈಗೆ ಕಪ್ಪು ಪಟ್ಟಿ ಕಟ್ಟಿ, ಬಾಯಿಗೆ ಮಾಸ್ಕ್ ಧರಿಸಿ ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿಎಎ, ಎನ್​ಆರ್​ಸಿ ಜನ ವಿರೋಧಿ ಕಾಯ್ದೆಗಳಾಗಿದ್ದು, ಕೇಂದ್ರ ಬಿಜೆಪಿ ಸರ್ಕಾರ ಈ ಕಾಯ್ದೆ ಜಾರಿ ಮಾಡುವ ಮೂಲಕ ಧರ್ಮ ಒಡೆಯುವ ಪ್ರಯತ್ನ ನಡೆಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಕೇಂದ್ರ ಸರ್ಕಾರ ಜನ ವಿರೋಧಿ ಎನ್​ಆರ್​ಸಿ, ಸಿಎಎ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು.

For All Latest Updates

ABOUT THE AUTHOR

...view details