ಕರ್ನಾಟಕ

karnataka

ETV Bharat / state

ಕೋವಿಡ್​ ಪರಿಣಾಮ: ಕಲಬುರಗಿಯಲ್ಲೂ ಹೆಚ್ಚಾಯ್ತು ವೈದ್ಯಕೀಯ ಉಪಕರಣಗಳ ಬೇಡಿಕೆ - ವೈದ್ಯಕೀಯ ಉಪಕರಣಗಳ ಮೇಲೆ ಕೋವಿಡ್​ ಪರಿಣಾಮ ಸುದ್ದಿ

ಕೋವಿಡ್​ ಪರಿಣಾಮದಿಂದ ಕಲಬುರಗಿ ಜಿಲ್ಲೆಯಲ್ಲೂ ವೈದ್ಯಕೀಯ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗಿದೆ.

ಕಲಬುರಗಿಯಲ್ಲಿ ಹೆಚ್ಚಾಯ್ತು ವೈದ್ಯಕೀಯ ಉಪಕರಣಗಳ ಬೇಡಿಕೆ Medical gadget demand increased by Corona
ಕಲಬುರಗಿಯಲ್ಲಿ ಹೆಚ್ಚಾಯ್ತು ವೈದ್ಯಕೀಯ ಉಪಕರಣಗಳ ಬೇಡಿಕೆ

By

Published : Sep 1, 2020, 2:06 PM IST

ಕಲಬುರಗಿ: ಕೋವಿಡ್-19 ಸೋಂಕಿನಿಂದಾಗಿ ಜಗತ್ತು ತಲ್ಲಣಗೊಂಡಿದೆ. ಜಿಲ್ಲೆಯಲ್ಲಿಯೂ ಕೊರೊನಾ ತಾಂಡವವಾಡ್ತಿದ್ದು, ಸಾರ್ವಜನಿಕರು ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸುತ್ತಿದ್ದಾರೆ. ಈ ನಡುವೆ ಡಿಜಿಟಲ್ ಆರೋಗ್ಯ ಸಲಕರಣರಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ.

ಜನರು ಪ್ರಾಥಮಿಕ ಆರೋಗ್ಯ ತಪಾಸಣೆಗೆ ಬೇಕಾದ ಅಗತ್ಯ ಡಿಜಿಟಲ್ ಆರೋಗ್ಯ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಸಾರ್ವಜನಿಕರಿಗೆ ಕೊರತೆಯಾಗದಂತೆ ಜಿಲ್ಲಾಡಳಿತ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿ ಮೀಟರ್, ಬಿಪಿ ಆಪರೇಟರ್, ಡಿಜಿಟಲ್ ಥರ್ಮಾಮೀಟರ್, ಗ್ಲುಕೋ ಮೀಟರ್ ಸೇರಿದಂತೆ ಡಿಜಿಟಲ್ ವೈದ್ಯಕೀಯ ಉಪಕರಣಗಳ ಶೇಖರಣೆ ಮಾಡಿಕೊಂಡಿದೆ. ಅವಶ್ಯಕತೆಗೆ ತಕ್ಕಷ್ಟು ಸ್ಟಾಕ್ ಲಭ್ಯವಿದೆ.

ಹೆಚ್ಚಾಯ್ತು ವೈದ್ಯಕೀಯ ಉಪಕರಣಗಳ ಬೇಡಿಕೆ

ಕೊರೊನಾ ಹರಡುವಿಕೆ ಉಲ್ಬಣಗೊಳ್ಳುತ್ತಿರುವ ಈ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ತಪಾಸಣಾ ಉಪಕರಣಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವಂತೆ ಜಿಲ್ಲಾ ಮೆಡಿಕಲ್ ಅಸೋಸಿಯೇಷನ್ ಕಾರ್ಯದರ್ಶಿ ಡಾ. ರವೀಂದ್ರ ಜೋಶಿ ಸಲಹೆ ನೀಡಿದ್ದಾರೆ.

ಖಾಸಗಿ ಮೆಡಿಕಲ್​ಗಳಲ್ಲಿ ಮಾರಾಟಕ್ಕಾಗಿ ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಉಪಕರಣಗಳನ್ನು ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಸದ್ಯ ಖಾಸಗಿ ಮೆಡಿಕಲ್ ಸಾಮಗ್ರಿ ಡೀಲರ್ಸ್​ಗಳಲ್ಲಿ ಡಿಜಿಟಲ್ ಥರ್ಮಾಮೀಟರ್ 2000, ಬಿಪಿ ಆಪರೇಟರ್ 500, ಪಲ್ಸ್ ಆಕ್ಸಿ ಮೀಟರ್​ 500, ಥರ್ಮಲ್ ಸ್ಕ್ಯಾನರ್ 200, ಗ್ಲುಕೋಮೀಟರ್ 400 ರಷ್ಟು ಸ್ಟಾಕ್ ಇವೆ. ಇದರಲ್ಲಿ ಕಲಬುರಗಿ ನಗರದ ಡಿಸ್ಟ್ರಿಬ್ಯೂಟರ್ಸ್​ ಬಳಿ ಅರ್ಧದಷ್ಟು ಶೇಖರಣೆ ಇದೆ. ಇನ್ನುಳಿದಂತೆ ಮೆಡಿಕಲ್ ಹಾಗೂ ತಾಲೂಕು ಮಟ್ಟದ ಡಿಲರ್ಸ್​ ಬಳಿ ಸಾಕಷ್ಟು ದಾಸ್ತಾನಿದೆ.

ಆರಂಭದಲ್ಲಿ ಮಾರಾಟ ಚೆನ್ನಾಗಿ ನಡೆದ ಕಾರಣ ಹೆಚ್ಚು ದಾಸ್ತಾನು ಮಾಡಿಕೊಳ್ಳಲಾಗಿತ್ತು. ಇದೀಗ ಮಾರಾಟ ಕಡಿಮೆಯಾಗಿದೆ. ಅಗತ್ಯಕ್ಕೆ ತಕ್ಕಂತೆ ಸ್ಟಾಕ್ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಇದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ವೈದ್ಯಕೀಯ ಉಪಕರಣಗಳ ಕೊರತೆ ಇಲ್ಲವೆಂದು ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಗೋಪಾಲ ಬಂಡಾರಿ ತಿಳಿಸಿದ್ದಾರೆ.

ABOUT THE AUTHOR

...view details