ಕಲಬುರಗಿ: ಸೇಡಂ ಪ್ರವೇಶಿಸುವ ಯಾರೊಬ್ಬರಿಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿಲ್ಲ. ಇದರಿಂದ ಸೇಫ್ಜೋನ್ ಆಗಿರುವ ಸೇಡಂಗೆ ಕೊರೊನಾ ವಕ್ಕರಿಸುವುದೇ ಎಂಬ ಅನುಮಾನ ಮೂಡತೊಡಗಿದೆ.
ಸೇಡಂಗೆ ಪ್ರವೇಶಿಸುವವರಿಗೆ ವೈದ್ಯಕೀಯ ಪರೀಕ್ಷೆ ಅಗತ್ಯ! ಇಲ್ಲವಾದರೆ...? - ಕಲಬುರಗಿ ಜಿಲ್ಲೆ ಸೇಡಂ
ದಿನೇ ದಿನೆ ಜಿಲ್ಲೆ ಕೊರೊನಾ ಪೀಡಿತರಿಂದ ತತ್ತರಿಸುತ್ತಿರುವ ಕಲಬುರಗಿ ಜಿಲ್ಲೆಯ ಸೇಡಂ ಜನತೆಗೆ ಈಗ ಆತಂಕ ಶುರುವಾಗಿದೆ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಲಾಗುತ್ತಿದೆ.
ಕಲಬುರಗಿಯ ಸೇಡಂಗೆ ಪ್ರವೇಶಿಸುವವರಿಗೆ ವೈದ್ಯಕೀಯ ಪರೀಕ್ಷೆ ಅಗತ್ಯ
ಸೇಡಂನಿಂದ ನಿತ್ಯ ಹತ್ತಾರು ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಬೇರೆ ಬೇರೆ ಕಡೆ ಪ್ರಯಾಣಿಸಿ ಹಿಂದಿರುಗುತ್ತಿದ್ದು, ಇಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ. ಸೇಡಂ ಮಾರ್ಗವಾಗಿ ತೆಲಂಗಾಣದ ಗಡಿಯವರೆಗೂ ಜನ ಸಂಚರಿಸುವುದು ಸಾಮಾನ್ಯವಾಗಿದೆ.
ಹೊರಗಿನಿಂದ ಬರುವ ಜನರಿಗೆ ಕನಿಷ್ಠ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿಲ್ಲ. ಇದರಿಂದ ಕೊರೊನಾ ಸೋಂಕಿಗೆ ತುತ್ತಾಗುವ ಭಯದಲ್ಲಿ ಜನ ಕಾಲ ಕಳೆಯುವಂತಾಗಿದೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.