ಕರ್ನಾಟಕ

karnataka

ETV Bharat / state

ಉಕ್ರೇನ್‌ನಲ್ಲಿರುವ ಕಲಬುರಗಿ ವಿದ್ಯಾರ್ಥಿನಿ ಸೇಫ್: ತಾಯಿ ಮುಂದೆ ಸ್ಥಿತಿಗತಿ ಬಿಚ್ಚಿಟ್ಟ ಯುವತಿ - ಉಕ್ರೇನ್‌ನಲ್ಲಿರುವ ಕಲಬುರಗಿ ವಿದ್ಯಾರ್ಥಿನಿ ಸೇಫ್

ಕಲಬುರಗಿಯವರಾದ ಜೀವಿತಾ ಉಕ್ರೇನ್‌ನ ಕಿವ್​ನಲ್ಲಿ ಎಂಬಿಬಿಎಸ್ 7 ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಷ್ಯಾ ದಾಳಿಯಿಂದ ಉಕ್ರೇನ್ ಜನ ತತ್ತರಿಸಿದ್ದು, ಜೀವಿತಾ ಇರುವ ಕಿವ್​ನಲ್ಲಿ ಸದ್ಯ ಅಂತಹ ದುಸ್ಥರ ಸ್ಥಿತಿಯಿಲ್ಲ ಎಂಬುದು ತಿಳಿದುಬಂದಿದೆ.

Mbbs-student jeevitha
ವಿದ್ಯಾರ್ಥಿನಿ ಜೀವಿತಾ

By

Published : Feb 24, 2022, 6:04 PM IST

ಕಲಬುರಗಿ:ಉಕ್ರೇನ್‌ನ ಕಿವ್​​ನಲ್ಲಿರುವ ಕಲಬುರಗಿ ವಿದ್ಯಾರ್ಥಿನಿ ಸೇಫ್ ಆಗಿದ್ದು, ತಾಯಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿ ತಾನು ಕ್ಷೇಮವಾಗಿರುವುದಾಗಿ ಹೇಳಿದ್ದಾರೆ.

ಕಲಬುರಗಿಯವರಾದ ಜೀವಿತಾ ಉಕ್ರೇನ್‌ನ ಕಿವ್​ನಲ್ಲಿ ಎಂಬಿಬಿಎಸ್ 7 ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಷ್ಯಾ ದಾಳಿಯಿಂದ ಉಕ್ರೇನ್ ಜನ ತತ್ತರಿಸಿದ್ದು, ಜೀವಿತಾ ಇರುವ ಕಿವ್​ನಲ್ಲಿ ಸದ್ಯ ಅಂತಹ ದುಸ್ಥರ ಸ್ಥಿತಿಯಿಲ್ಲ ಎಂಬುದು ತಿಳಿದುಬಂದಿದೆ. ಕಲಬುರಗಿ ನಗರದ ಗುಲಬರ್ಗಾ ವಿವಿಯ ಬಯೋ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆಯಾದ ಲಲಿತಾ ಅವರು ತಮ್ಮ ಮಗಳೊಂದಿಗೆ ಮಾತನಾಡಿ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.

ಈಗಷ್ಟೇ ತಾಯಿ ಜೊತೆ ಮಾತನಾಡಿದ ಜೀವಿತಾ, ಕಿರಾಣಿ ಅಂಗಡಿಯಲ್ಲಿ ವಸ್ತುಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾಳಂತೆ. ಸದ್ಯ ಎಂಬಿಬಿಎಸ್ ಪರೀಕ್ಷೆ ಇರುವ ಕಾರಣ ಮಗಳು ಭಾರತಕ್ಕೆ ಮರಳುವುದಿಲ್ಲ ಅಂತ ಲಲಿತಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಓದಿ:ಉಕ್ರೇನ್​​ನಲ್ಲಿ ಸಿಲುಕಿಕೊಂಡ ಹುಬ್ಬಳ್ಳಿ ಮೂಲದ MBBS ವಿದ್ಯಾರ್ಥಿನಿ.. ಪೋಷಕರಿಗೆ ಆತಂಕ

ABOUT THE AUTHOR

...view details