ಕಲಬುರಗಿ:ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಉದ್ಘಾಟಿಸಿದರು.
ಕಲಬುರಗಿಯಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ : ವಿದ್ಯಾರ್ಥಿಗಳೊಂದಿಗೆ ಸಂವಾದ - matte kalyana function in kalaburgi
ಸಾಣೇಹಳ್ಳಿ ಮಠದ ಪೀಠಾಧಿಪತಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ಜರುಗುತ್ತಿದ್ದು, ಕಲಬುರಗಿಯಲ್ಲೂ ಅರ್ಥಪೂರ್ಣವಾಗಿ ಜರುಗಿತು.
ಶಿವಾಚಾರ್ಯ
ಕಾರ್ಯಕ್ರಮದ ಸಹಮತ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸ್ವಾಮೀಜಿಗಳು ಮುಕ್ತ ಸಂವಾದ ನಡೆಸಿದರು. ಬಳಿಕ ನಗರೇಶ್ವರ ಶಾಲೆಯಿಂದ ರಂಗಮಂದಿರದವರೆಗೆ ಶ್ರೀಗಳ ಸಮ್ಮುಖದಲ್ಲಿ ಸಾಮರಸ್ಯದ ನಡಿಗೆ ನಡೆಯಿತು.
ಇನ್ನು ಸಾರ್ವಜನಿಕ ಸಮಾವೇಶದಲ್ಲಿ ಶರಣರ ಪ್ರತಿಭಟನೆ ಮಾರ್ಗ ವಿಷಯದ ಕುರಿತು, ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಬಾಳಿ ಮಾತನಾಡಿದರು. ಶರಣರ ಪ್ರಶ್ನೆ-ಪ್ರತಿಭಟನೆಯ ದಾರಿ ಪರ್ಯಾಯ ಗುರಿ ವಿಷಯದ ಕುರಿತು, ಶರಣ ಚಿಂತಕ ಡಾ.ಬಸವರಾಜ್ ಉಪನ್ಯಾಸ ನೀಡಿದರು.