ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಕೈಮಗ್ಗ ಸೀರೆ ಪ್ರದರ್ಶನ: ಖರೀದಿಗೆ ಮುಗಿಬಿದ್ದ ಜನ - ಕಲಬುರಗಿ ಕೈಮಗ್ಗ ಸೀರೆಗಳ ವಸ್ತು ಪ್ರದರ್ಶನ

ಕಲಬುರಗಿಯಲ್ಲಿ ಕ್ರಿಸ್​ ಮಸ್ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೃಹತ್ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ.

handloom-sarees
ಕೈಮಗ್ಗ ಸೀರೆ ಪ್ರದರ್ಶನ

By

Published : Jan 3, 2020, 1:39 PM IST

ಕಲಬುರಗಿ: ಕ್ರಿಸ್ ಮಸ್ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾ ಮಂಡಳಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಇನ್ನಿತರ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೃಹತ್ ಕೈಮಗ್ಗ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ.

ಶೇ.20% ರಿಯಾಯಿತಿ ದರದಲ್ಲಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಬೇರೆ ಬೇರೆ ಜಿಲ್ಲೆಗಳ ಕೈಮಗ್ಗ ನೇಕಾರರಿಂದ ತಯಾರಿಸಲ್ಪಟ್ಟ ವೈವಿಧ್ಯಮಯ ಹತ್ತಿ ರೇಷ್ಮೆ ಮತ್ತು ಉಣ್ಣೆ ಬಟ್ಟೆಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿತ್ತು. ಉತ್ತರ ಕರ್ನಾಟಕದ ಇಳಕಲ್ ಸೀರೆಗಳು ಸೇರಿದಂತೆ ವಿವಿಧ ಬಗೆಯ ಅಪ್ಪಟ ಕೈಮಗ್ಗ ಸೀರೆಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ.

ಕೈಮಗ್ಗ ಸೀರೆ ಪ್ರದರ್ಶನ

ನೇಕಾರರು ತಯಾರಿಸಲ್ಪಿಟ್ಟಿರುವ ಬಟ್ಟೆಗಳನ್ನು ಮಾರುವುದಕ್ಕೆ ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು ಕಲಬುರಗಿ ಜನರು ಕನ್ನಡ ಭವನಕ್ಕೆ ಆಗಮಿಸಿ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಈ ಬಟ್ಟೆಗಳು ಕೈಯಿಂದ ನೇಯ್ದಿದಿರುವುದರಿಂದ ಆರೋಗ್ಯಕ್ಕೂ ಉತ್ತಮ ಎಂದು ಕರ್ನಾಟಕ ರಾಜ್ಯ ಕೈಮಗ್ಗ ನೇಕಾರರ ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಸ್. ಮುದ್ದಯ್ಯ ಹೇಳಿದರು.

ಸತತ 14 ದಿನಗಳ ಕಾಲ ಹಮ್ಮಿಕೊಂಡಿರುವ ಕೈಮಗ್ಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸುಮಾರು 20ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ. ಬಿಸಿಲೂರಿನ ಜನರನ್ನು ಈ ಮೇಳ ಆಕರ್ಷಿಸುತ್ತಿದೆ. ರೇಷ್ಮೆ ಇಂದ ತಯಾರಿಸ್ಪಟ್ಟ ವಸ್ತ್ರಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ

ABOUT THE AUTHOR

...view details