ಕರ್ನಾಟಕ

karnataka

By

Published : Jul 6, 2020, 3:52 PM IST

ETV Bharat / state

ಸಂಕಷ್ಟದಲ್ಲಿರುವ ರೈತರಿಗೆ ಹೊಸ ಸಾಲ ವಿತರಿಸಿ.. ಮಾರುತಿ ಮಾನ್ಪಡೆ ಆಗ್ರಹ

ಬ್ಯಾಂಕ್​ಗಳಿಂದ ಸಾಲ ಮರುಪಾವತಿಗೆ ರೈತರ ಮೇಲೆ ಒತ್ತಡ ತರಲಾಗ್ತಿದೆ. ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಆರಂಭಗೊಂಡಿವೆ. ಕೃಷಿ ಚಟುವಟಿಕೆಗೆ ಅಗತ್ಯವಿರೋ ಸಾಲ ಸಿಗುತ್ತಿಲ್ಲ. ಹಳೆಯ ಸಾಲ ತೀರಿಸಿದರೆ ಮಾತ್ರ ಹೊಸ ಸಾಲ ಕೊಡೋದಾಗಿ ಬ್ಯಾಂಕ್ ಹೇಳುತ್ತಿವೆ ಎಂದು ಆರೋಪಿಸಿದರು..

maruti manpade
ಕರ್ನಾಟಕ ಪ್ರಾಂತ್ಯ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ

ಕಲಬುರ್ಗಿ :ರಾಜ್ಯಾದ್ಯಂತ ಕೊರೊನಾ ಸಂಕಷ್ಟದಲ್ಲಿರುವಾಗ ಸಾಲದ ಕಂತು ಕಟ್ಟಿದ್ರೆ ಮಾತ್ರ ಹೊಸ ಕೃಷಿ ಸಾಲ ನೀಡೋದಾಗಿ ಬ್ಯಾಂಕ್​ಗಳು ಹೇಳುತ್ತಿವೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.

ಬ್ಯಾಂಕ್​ಗಳಿಂದ ಸಾಲ ಮರುಪಾವತಿಗೆ ರೈತರ ಮೇಲೆ ಒತ್ತಡ ತರಲಾಗ್ತಿದೆ. ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಆರಂಭಗೊಂಡಿವೆ. ಕೃಷಿ ಚಟುವಟಿಕೆಗೆ ಅಗತ್ಯವಿರೋ ಸಾಲ ಸಿಗುತ್ತಿಲ್ಲ. ಹಳೆಯ ಸಾಲ ತೀರಿಸಿದ್ರೆ ಮಾತ್ರ ಹೊಸ ಸಾಲ ಕೊಡೋದಾಗಿ ಬ್ಯಾಂಕ್ ಹೇಳುತ್ತಿವೆ ಎಂದು ಆರೋಪಿಸಿದರು.

ಕರ್ನಾಟಕ ಪ್ರಾಂತ್ಯ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ

ಸಾವಿರಾರು ಕೋಟಿ ರೂ. ಸಾಲ ಮಾಡಿ ವಂಚಿಸಿದವರ ಸಾಲ ಮನ್ನಾ ಮಾಡಲಾಗ್ತಿದೆ. ಆದರೆ, ದೇಶಕ್ಕೆ ಅನ್ನ ಕೊಡುವ ರೈತನಿಗೆ ಸಾಲ ಮರುಪಾವತಿಗೆ ಪೀಡಿಸಲಾಗ್ತಿದೆ. ಕೂಡಲೇ ಹೊಸ ಸಾಲ ನೀಡಬೇಕು. ಮುಂಗಾರು ಕೃಷಿ ಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕು ಎಂದು ಮಾನ್ಪಡೆ ಆಗ್ರಹಿಸಿದ್ದಾರೆ.

ABOUT THE AUTHOR

...view details