ಕರ್ನಾಟಕ

karnataka

ETV Bharat / state

ಕಲಬುರಗಿ: ಕಾರ್ಖಾನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಮಾಜಿ ಶಾಸಕ ಸೇರಿ ಹಲವು ರೈತರು ವಶಕ್ಕೆ

ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಹಾಗೂ ಅತಿ ಶೀಘ್ರವಾಗಿ ಕಾರ್ಖಾನೆ ಪ್ರಾರಂಭಿಸುವಂತೆ ಆಗ್ರಹಿಸಿ ಕಾರ್ಖಾನೆ ಮುತ್ತಿಗೆಗೆ ಯತ್ನಿಸಿದ ನೂರಾರು ಜನ ರೈತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ.

Many farmers, including the former MLA, who came to lay siege to the factory, were arrested
ಕಾರ್ಖಾನೆ ಮುತ್ತಿಗೆ ಹಾಕಲು ಆಗಮಿಸಿದ ಮಾಜಿ ಶಾಸಕ ಸೇರಿ ಹಲವು ರೈತರು ಬಂಧನ

By

Published : Nov 10, 2022, 12:05 PM IST

Updated : Nov 10, 2022, 3:13 PM IST

ಕಲಬುರಗಿ:ಈಗಾಗಲೇ ಬೆಳೆದ ನಿಂತಿದ ಕಬ್ಬು ಎಲ್ಲಿ ಒಣಗಿ ಹೋಗುತ್ತವೆ ಎಂಬ ಆತಂಕದಲ್ಲಿ ರೈತರು ಕೂಡಲೇ ಕಾರ್ಖಾನೆ ಆರಂಭಿಸುವಂತೆ ಹಾಗೂ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಆಳಂದ ಎನ್ಎಸ್ಎಲ್ ಶೂಗರ್ ಕಾರ್ಖಾನೆಗೆ ಟ್ರ್ಯಾಕ್ಟರ್​ಗಳ ಸಮೇತ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಮಾಜಿ ಶಾಸಕ ಬಿ ಆರ್ ಪಾಟೀಲ್ ಸೇರಿ ಒಟ್ಟು 150ಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ಕಾರ್ಖಾನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಮಾಜಿ ಶಾಸಕ ಸೇರಿ ಹಲವು ರೈತರು ವಶಕ್ಕೆ

ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದು ವಶಕ್ಕೆ ಪಡೆವರನ್ನು ಬಿಡುಗಡೆಗೊಳಿಸಲಾಯಿತು. ನಂತರ ಮಾತನಾಡಿದ ಮಾಜಿ ಶಾಸಕರು ಕಬ್ಬು ಬೆಳೆಗಾರ ಸಂಕಷ್ಟ ಕಾರ್ಖಾನೆ ಅವರಿಗೆ ಅರ್ಥವಾಗುತ್ತಿಲ್ಲ. ಹಲವು ದಿನಗಳಿಂದ ಹೋರಾಟ ನಡೆಸಲು ಬಂದರು ಸಹ ರೈತರಿಗೆ ಬೆಲೆ ಕೊಡದ ರೀತಿಯಲ್ಲಿ ಕಾರ್ಖಾನೆ ಆಡಳಿತ ಮಂಡಳಿ ನಡೆದುಕೊಂಡಿದೆ ಎಂದು ಆರೋಪಿಸಿದರು.

ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು‌. ಒಂದು ವೇಳೆ ನಾಳೆ ಕಾರ್ಖಾನೆ ಪ್ರಾರಂಭ ಮಾಡದಿದ್ದರೆ, ನಾಡಿದ್ದು ಮತ್ತೆ ಹೋರಾಟ ಮುಂದುವರೆಸಲಾಗುವುದು ಎಂದು ಕಾರ್ಖಾನೆ ಆಡಳಿತ ‌ಮಂಡಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಕಬ್ಬು ಬೆಳೆ ದರ ನಿಗದಿಗೆ ಒತ್ತಾಯಿಸಿ ಸಮೀರವಾಡಿ ರೈತರ ಹೋರಾಟ.. ಕಲ್ಲು ತೂರಾಟ, ಪೊಲೀಸರಿಗೆ ಗಾಯ

Last Updated : Nov 10, 2022, 3:13 PM IST

ABOUT THE AUTHOR

...view details