ಕರ್ನಾಟಕ

karnataka

ETV Bharat / state

ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ ರಾಠೋಡ್​ ಅಭಿಮಾನಿಗಳ ಆಕ್ರೋಶ - fans outrage against Priyank Kharge

ಮಣಿಕಂಠ ರಾಠೋಡ್‌ ಅವರ ಬೆಂಬಲಿಗರು ನಗರದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಣಿಕಂಠ ರಾಠೋಡ್‌ ಬೆಂಬಲಿಗರಿಂದ ಪ್ರತಿಭಟನೆ
ಮಣಿಕಂಠ ರಾಠೋಡ್‌ ಬೆಂಬಲಿಗರಿಂದ ಪ್ರತಿಭಟನೆ

By

Published : Dec 6, 2022, 6:10 PM IST

Updated : Dec 6, 2022, 6:30 PM IST

ಕಲಬುರಗಿ: ಚಿತ್ತಾಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಗುದ್ದಾಟ ಮತ್ತಷ್ಟು ತಾರಕಕ್ಕೇರುತ್ತಿದೆ. ಬಿಜೆಪಿ‌ ಮುಖಂಡ ಮಣಿಕಂಠ ರಾಠೋಡ್‌ ಅವರ ಬೆಂಬಲಿಗರು ನಗರದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಮಣಿಕಂಠ ಠಾಠೋಡ್​ ಅವರಿಗೆ ಜೀವಭಯವಿದ್ದ, ಪೊಲೀಸರು ಸೂಕ್ತ ಭದ್ರತೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ ರಾಠೋಡ್​ ಅಭಿಮಾನಿಗಳ ಆಕ್ರೋಶ

ನಗರದ ಸರ್ಧಾರ್​ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಣಿಕಂಠ ರಾಠೋಡ್ ವಿರುದ್ಧ ಕೊಲೆ ಸಂಚು ನಡೆಸಲಾಗಿದೆ. ಶಾಸಕರ ಆಪ್ತ ರಾಜು ಕಪನೂರ ಅಕ್ರಮ ನಾಡ ಪಿಸ್ತೂಲ್ ಖರೀದಿಸಿದ್ದೇ, ಇದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದ್ದಾರೆ.

ಕೊಲೆ ಸಂಚಿನ ಕುರಿತಾಗಿ ಸಿಬಿಐ ಅಥವಾ ಸಿಐಡಿ ತನಿಖೆ ಮಾಡಿಸಬೇಕು. ಮಣಿಕಂಠ ರಾಠೋಡ್​ಗೆ ಸೂಕ್ತ ಭದ್ರತೆ ಒದಗಿಸಬೇಕು. ಇಲ್ಲದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಬೆಂಬಲಿಗರು ಎಚ್ಚರಿಸಿದರು‌.

ಇದನ್ನೂ ಓದಿ:ಪಿಸ್ತೂಲ್ ಖರೀದಿ ಆರೋಪ: ಕಲಬುರಗಿ ಪಾಲಿಕೆ ಮಾಜಿ ಸದಸ್ಯನ ಬಂಧನ

Last Updated : Dec 6, 2022, 6:30 PM IST

ABOUT THE AUTHOR

...view details