ಕಲಬುರಗಿ: ಆಗಸ್ಟ್ 4 ರಂದು ಕಲಬುರಗಿಗೆ ಭೇಟಿ ನೀಡಿದ್ದ ಡಿಕೆಶಿ ಅವರನ್ನು ಇಲ್ಲಿನ ಜಯಪ್ಪ ಎಂಬವರು ಶಾಲು ಹೊದಿಸಿ ಸನ್ಮಾನಿಸಿದ್ದರು. ಈ ವ್ಯಕ್ತಿಯಲ್ಲಿ ಇದೀಗ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಕಲಬುರಗಿಯಲ್ಲಿ ಡಿಕೆಶಿ ಸನ್ಮಾನಿಸಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢ - ಡಿಕೆ ಶಿವಕುಮಾರ್ ಗೆ ಕೊರೊನಾ ಟೆನ್ಷನ್
ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಸನ್ಮಾನಿಸಿದ್ದ ಜಯಪ್ಪ ಎಂಬವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಹೀಗಾಗಿ, ಕೆಪಿಸಿಸಿ ಮುಖ್ಯಸ್ಥರು ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ.
![ಕಲಬುರಗಿಯಲ್ಲಿ ಡಿಕೆಶಿ ಸನ್ಮಾನಿಸಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢ Corona grinned man felicitated DK Shivakumar](https://etvbharatimages.akamaized.net/etvbharat/prod-images/768-512-8330290-37-8330290-1596796976776.jpg)
ಕಲಬುರಗಿ: ಡಿಕೆಶಿಗೆ ಸನ್ಮಾನ ಮಾಡಿದ್ದ ವ್ಯಕ್ತಿಗೆ ಕೊರೊನಾ ಧೃಢ
ಗಾಣಗಾಪೂರ ದರ್ಶನಕ್ಕೆ ತೆರಳಿದ್ದ ವೇಳೆ ಡಿಕೆಶಿ ಸಾಮಾಜಿಕ ಅಂತರ ಮರೆತು ಅಭಿಮಾನಿಗಳು ಹಾಗು ಪಕ್ಷದ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದ್ದರು.
ಕಲಬುರಗಿಯಲ್ಲಿ ಡಿಕೆಶಿ ಸನ್ಮಾನಿಸಿದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಹೀಗಾಗಿ ಸಹಜವಾಗಿಯೇ ಡಿಕೆಶಿ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ.