ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧ ಶಂಕೆ.. ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ.. - ಕಲಬುರಗಿಯಲ್ಲಿ ಪತಿಯಿಂದ ಪತ್ನಿ ಕೊಲೆ ಸುದ್ದಿ

ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯನ್ನು ಕೊಲೈಗೈದು ಪತಿ ಪೊಲೀಸರಿಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

murder
ಪತ್ನಿಯನ್ನು ಕೊಂದು ಪತಿ ಪೊಲೀಸರಿಗೆ ಶರಣು

By

Published : Jan 3, 2020, 11:54 AM IST

ಕಲಬುರಗಿ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯನ್ನು ಹತ್ಯೆಗೈದ ಘಟನೆ ನಗರದ ಹೊರವಲಯ ಸ್ವಾಮಿ ಸಮರ್ಥ ದೇವಸ್ಥಾನ ಬಳಿ ನಡೆದಿದೆ.

ಕೊಲೆಯ ನಂತರ ಪತಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಕೊಲೆಯಾದ ಮಹಿಳೆ ಮಹಾಗಾಂವದವರು ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಲೆಗೈದ ಪತಿ ಶರಣಪ್ಪ ಬಳಿಕ ಪೊಲೀಸ್ ಸ್ಟೇಷನ್‌ಗೆ ತೆರಳಿ ಶರಣಾಗಿದ್ದಾನೆ. ಐದು ವರ್ಷದ ಹಿಂದೆ ಈ ದಂಪತಿ ಮದುವೆಯಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಇಬ್ಬರು ಪರಸ್ಪರ ಇತರರೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆ ಹೊಂದಿ ವಿಚ್ಛೇದನ ಕೂಡಾ ಪಡೆದಿದ್ದರು. ಡಿವೋರ್ಸ್ ನಂತರವೂ ಹೊಂದಾಣಿಕೆಯಿಂದ ಬದುಕುವ ನಿರ್ಧಾರಕ್ಕೆ ಬಂದು ಮತ್ತೆ ಕೂಡಿ ಬಾಳಲು ಆರಂಭಿಸಿದ್ದರು.

ಪತ್ನಿಯನ್ನು ಕೊಂದು ಪತಿ ಪೊಲೀಸರಿಗೆ ಶರಣು

ಆದರೆ, ಇವರ ಮನದಲ್ಲಿದ್ದ ಅನುಮಾನದ ಭೂತ ಮತ್ತೆ ಇಬ್ಬರ ನಡುವೆ ಕಲಹಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಪತ್ನಿಯನ್ನ ಸ್ವಾಮಿ ಸಮರ್ಥ ದೇವಸ್ಥಾನದ ಬಳಿ ಇರುವ ಹೊಲಕ್ಕೆ ಕರೆದೊಯ್ದು ಆಕೆಯ ವೇಲ್‌ನಿಂದ ಕುತ್ತಿಗೆಗೆ ಬಿಗಿದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ನೇರವಾಗಿ ಪೊಲೀಸ್​​ ಠಾಣೆಗೆ ಶರಣಪ್ಪ ಶರಣಾಗಿದ್ದಾನೆ.

ಆದರೆ, ಏನೂ ಅರಿಯದ ಕಂದಮ್ಮಗಳು ತಾಯಿಯ ಸಾವು, ತಂದೆಯ ಜೈಲು ಪಾಲಿನಿಂದ ಅನಾಥವಾಗಿವೆ. ಪ್ರಕರಣ ಕುರಿತಾಗಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

For All Latest Updates

ABOUT THE AUTHOR

...view details