ಕರ್ನಾಟಕ

karnataka

ETV Bharat / state

ರುಂಡವಿಲ್ಲದ ಮೃತದೇಹ ಪತ್ತೆ ಪ್ರಕರಣ: ಆರೋಪಿಗಳು ಅಂದರ್​​ - undefined

ರುಂಡ ಮುಂಡ ಬೇರ್ಪಡಿಸಿ ಬರ್ಬರವಾಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಕಮಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ‌.

ಕಲಬುರಗಿ

By

Published : Mar 18, 2019, 10:08 AM IST

ಕಲಬುರಗಿ: ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರುಂಡವಿಲ್ಲದ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ‌.

ಅಮೃತ ಪೊಲೀಸ್ ಪಾಟೀಲ್, ಈತನ ಪತ್ನಿ ವೆಂಕಮ್ಮ, ಸುನೀತಾ ಹಾಗೂ ಬಸವರಾಜ ಕಡಬೂರು ಬಂಧಿತ ಆರೋಪಿಗಳು. ಕೊಲೆಯಾದ ವ್ಯಕ್ತಿ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದ ಶರಣಬಸಪ್ಪ ದೊಡ್ಡಮನಿ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಕೊಲೆಗೆ ಲೈಂಗಿಕ ಶೋಷಣೆಯೇ ಕಾರಣ ಎನ್ನಲಾಗಿದೆ.

ಕೊಲೆಯಾದ ಶರಣಬಸಪ್ಪ ಆರೋಪಿ ಸುನೀತಾಳಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ಆರೋಪಿಗಳು ಆತನನ್ನು ಕಾಳನೂರು ಬಾಳೆ ತೋಟಕ್ಕೆ ಕರೆಸಿ ರುಂಡ ಮುಂಡ ಬೇರ್ಪಡಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ದೇಹ ಕಮಲಾಪುರ ಠಾಣಾ ವ್ಯಾಪ್ತಿಯ ಬೆಣ್ಣೆತೋರಾ ಡ್ಯಾಂನಲ್ಲಿ ಹಾಗೂ ರುಂಡ ತಾವರಗೇರಾ ಸೀಮಾಂತರದಲ್ಲಿ ಬಿಸಾಡಿ ಪರಾರಿಯಾಗಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೊಲೆಯಾದ ವ್ಯಕ್ತಿ ಕುರಿತು ಶೀಘ್ರ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details