ಕಲಬುರಗಿ: ಹೋಮ್ ಕ್ವಾರಂಟೈನ್ನಿಂದ ಹೊರಬಂದ ವ್ಯಕ್ತಿ ವಿರುದ್ಧ ನಗರದ ವಿಶ್ವವಿದ್ಯಾಲಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಲಬುರಗಿಯಲ್ಲಿ ಹೋಂ ಕ್ವಾರಂಟೈನ್ನಿಂದ ಹೊರಬಂದ ವ್ಯಕ್ತಿ ವಿರುದ್ಧ ಪ್ರಕರಣ - ಹೋಂ ಕ್ವಾರಂಟೈನ್ನಿಂದ ಹೊರಬಂದ ವ್ಯಕ್ತಿ
ಚಿತ್ತಾಪುರ ತಾಲೂಕಿನ ಗ್ರಾಮವೊಂದರಲ್ಲಿ 32 ವರ್ಷದ ವ್ಯಕ್ತಿಯೊರ್ವ ಹೋಮ್ ಕ್ವಾರಂಟೈನ್ನಿಂದ ಹೊರ ಬಂದಿದ್ದು, ಆತನ ವಿರುದ್ಧ ಐಪಿಸಿ ಕಲಂ 188, 271ರ ಅಡಿ ವಿಶ್ವವಿದ್ಯಾಲಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
![ಕಲಬುರಗಿಯಲ್ಲಿ ಹೋಂ ಕ್ವಾರಂಟೈನ್ನಿಂದ ಹೊರಬಂದ ವ್ಯಕ್ತಿ ವಿರುದ್ಧ ಪ್ರಕರಣ Man left the Home Quarantine](https://etvbharatimages.akamaized.net/etvbharat/prod-images/768-512-6531217-thumbnail-3x2-net.jpg)
ಹೋಂ ಕ್ವಾರಂಟೈನ್ನಿಂದ ಹೊರಬಂದ ವ್ಯಕ್ತಿ.. ಕೇಸ್ ದಾಖಲಿಸಿದ ಖಾಕಿ
ಜಿಲ್ಲೆಯ ಚಿತ್ತಾಪುರ ತಾಲೂಕಿನ ನಿಪ್ಪಾಣಿ ಗ್ರಾಮದ 32 ವರ್ಷದ ವ್ಯಕ್ತಿ ಮಾರ್ಚ್ 16ರಂದು ದುಬೈನಿಂದ ಹಿಂತಿರುಗಿದ್ದ. ಹಾಗಾಗಿ ಅವನನ್ನು ನಿಪ್ಪಾಣಿ ಗ್ರಾಮದಲ್ಲಿ ಹೋಂ ಕ್ವಾರಂಟೈನ್ನಲ್ಲಿಡಲಾಗಿತ್ತು. ಆದ್ರೆ, ಆತ ಮಾರ್ಚ್ 22ರಂದು ಕಲಬುರಗಿ ನಗರಕ್ಕೆ ಬಂದಿದ್ದ ಕಾರಣ ಆತನ ವಿರುದ್ಧ ಐಪಿಸಿ ಕಲಂ 188, 271ರ ಅಡಿ ವಿಶ್ವವಿದ್ಯಾಲಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೆ ಹೋಂ ಕ್ವಾರಂಟೈನ್ ಮುಂದುವರಿಸುವಂತೆ ತಾಕೀತು ಮಾಡಿ ಕಳಿಸಿದ್ದಾರೆ.