ಕರ್ನಾಟಕ

karnataka

ETV Bharat / state

ಬೆಚ್ಚಿಬಿದ್ದ ಸೇಡಂ...  ಕೌಟುಂಬಿಕ ಕಲಹ - ಹೆಂಡತಿ, ಮಗಳನ್ನೇ ಕೊಂದ ಪಾಪಿ - ಕಲಬುರಗಿ ಕೊಲೆ ನ್ಯೂಸ್​

ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಹಾಗೂ ಮಗಳನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಕೌಟುಂಬಿಕ ಕಲಹ
ಕೌಟುಂಬಿಕ ಕಲಹ

By

Published : Sep 23, 2021, 9:55 AM IST

ಸೇಡಂ/ಕಲಬುರಗಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿ ಹಾಗೂ ಮಗಳನ್ನೇ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ನಡೆದಿದೆ. ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ಕಲಬುರಗಿ ನಿವಾಸಿ ದಿಗಂಬರ ಹಣಮಂತಪ್ಪ ಗಾಂಜಲಿ (47) ಕೊಲೆ ಮಾಡಿದ ಆರೋಪಿ. ಈತ ತನ್ನ ಪತ್ನಿ ಜಗದೇವಿ (35) ಹಾಗೂ ಮಗಳು ಪ್ರಿಯಾಂಕಾ (11) ಇಬ್ಬರನ್ನೂ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ:ಶಿವಮೊಗ್ಗ ಗಾಂಜಾ ಗ್ಯಾಂಗ್​​ವಾರ್ ಪ್ರಕರಣ​.. ಚಾಕು ಹಿಡಿದು ಹೆದರಿಸಲು ಹೋದವ ಹೆಣವಾದ

ಕೆಲ ತಿಂಗಳುಗಳ ಹಿಂದಷ್ಟೇ ಕಲಬುರಗಿಯಿಂದ ಈ ಕುಟುಂಬ ಪಟ್ಟಣದಲ್ಲಿ ಬಂದು ನೆಲೆಸಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

ಇದನ್ನೂ ಓದಿ:ರಾಯಚೂರು: ಅಣ್ಣನನ್ನೇ ಕೊಂದು ಹಾಕಿದ ತಮ್ಮ !

ಈ ಕುರಿತು ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details