ಕಲಬುರಗಿ: ಬಾವಿಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಲಬುರಗಿ ನಗರದ ಹೊರವಲಯದ ಕಪನೂರು ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಕಪನೂರಿನ ಕುಂಜ ಮಾ ಸಾಹೇಬ್ ದರ್ಗಾ ಹಿಂಬದಿಯ ಬಾವಿಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಬಾವಿಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು - Man drowned in water Death at Kalaburagi
ಗುರುವಾರದಂದು ಗುಲಾಂ ರಸೂಲ್ ಈಜಲು ಹೋಗಿದ್ದ. ಈ ವೇಳೆ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬಾವಿಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು
ಮೃತ ದುರ್ದೈವಿಯನ್ನು ಹಾಗರಗಾ ಕ್ರಾಸ್ ನಿವಾಸಿ ಗುಲಾಂ ರಸೂಲ್(38) ಎಂದು ಗುರುತಿಸಲಾಗಿದೆ. ಗುರುವಾರದಂದು ಗುಲಾಂ ರಸೂಲ್ ಈಜಲು ಹೋಗಿದ್ದ. ಈ ವೇಳೆ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಶವ ತೆಗೆಯಲೆತ್ನಿಸಿದರೂ ಫಲ ಸಿಕ್ಕಿರಲಿಲ್ಲ. ಇಂದು ಶವ ಮೇಲೆ ತೇಲಿದ ನಂತರ ಅದನ್ನು ಹೊರ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
TAGGED:
Kalburgi news