ಕಲಬುರಗಿ:ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಯುವಕನೊಬ್ಬ ಬಿದ್ದು ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ಗ್ರಾಮದ ಹಾಜಿ ಸರ್ವರ್ ದರ್ಗಾದ ಗುಡ್ಡದಲ್ಲಿ 10 ರಿಂದ 15 ಜನರಿದ್ದ ತಂಡ ಜೂಜಾಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು.
ಸಿದ್ದಪ್ಪಾಕೊಂಡ (22) ಮೃತಪಟ್ಟ ಯುವಕ. ಆದರೆ ಈತ ಜೂಜಾಟ ಆಡುತ್ತಿರಲಿಲ್ಲ. ಅಲ್ಲಿ ಯುವಕರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದನಂತೆ. ಯುವಕನ ಕುಟುಂಬಸ್ಥರು ಮಾತನಾಡಿ, ಅಲ್ಲಿ ಯಾರೂ ಜೂಜಾಟ ಆಡುತ್ತಿರಲಿಲ್ಲ. ಪೊಲೀಸರು ಅನಗತ್ಯವಾಗಿ ದಾಳಿ ಮಾಡಿ ನಮ್ಮ ಮಗನನ್ನು ಕೊಂದು ಹಾಕಿದರು ಎಂದು ಆರೋಪಿಸಿದ್ದಾರೆ.