ಕಲಬುರಗಿ:ಜಾನುವಾರು ಖದಿಯಲು ಹೋಗಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಫರತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೆಸ್ಟ್ ಮುಂಬೈ ಮೂಲದ ಫರೀದ್ ಶೇಕ್ ಖುರೇಶಿ (40) ಮೃತ ವ್ಯಕ್ತಿ. ಈತ ಮಧ್ಯರಾತ್ರಿ ಸಿರನೂರ ಗ್ರಾಮದ ಮನೆಯೊಂದರಲ್ಲಿ ಜಾನುವಾರು ಖದೀಯುವಾಗ ಗ್ರಾಮಸ್ಥರು ಬೆನ್ನಟ್ಟಿದ್ದರು.
ಕುಡಿದ ನಶೆಯಲ್ಲಿದ್ದ ಫರೀದ್ ಹೊಲವೊಂದರಲ್ಲಿ ಓಡಿ ಹೋಗಿ ಗ್ರಾಮಸ್ಥರಿಂದ ತಪ್ಪಿಸಿಕೊಂಡಿದ್ದ. ಆದರೂ ಬೆನ್ನು ಬಿಡದ ಗ್ರಾಮಸ್ಥರು ಆತನನ್ನು ಪತ್ತೆ ಮಾಡಿ ಪೊಲೀಸ್‌ರಿಗೊಪ್ಪಿಸಿದ್ದರು.