ಕಲಬುರಗಿ: ಕಾರು ಹರಿದು ಪಾದಚಾರಿ ಸಾವನ್ನಪ್ಪಿದ ಹಿನ್ನೆಲೆ ಸಂಬಂಧಿಕರು ರಸ್ತೆ ಮೇಲೆ ಶವ ಇಟ್ಟು ಪ್ರತಿಭಟನೆ ಮಾಡಿದ್ದಾರೆ.
ವಾಹನ ಹರಿದು ವ್ಯಕ್ತಿ ಸಾವು: ರಸ್ತೆ ಮೇಲೆ ಶವ ಇಟ್ಟು ಸಂಬಂಧಿಕರ ಆಕ್ರೋಶ - kalburgi accident
ಶವದ ಮರಣೋತ್ತರ ಪರೀಕ್ಷೆ ಮುಗಿದ ನಂತರ ಮೃತನ ದೇಹವನ್ನು ರಸ್ತೆ ಮೇಲೆ ಇಟ್ಟು ಪಂಚಶೀಲ ನಗರ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಕಲಬುರಗಿಯ ಹಳೆ ಜೇವರ್ಗಿ ರಸ್ತೆಯ ಪಂಚಶೀಲ ನಗರದಲ್ಲಿ ಈ ಘಟನೆ ಜರುಗಿದೆ. ಕಳೆದ ರಾತ್ರಿ ಕಾರು ಹರಿದು ಕಿರಣ ಕುಮಾರ್ ತಳವಾರ (35) ಎಂಬುವರು ಮೃತಪಟ್ಟಿದ್ದರು. ಶವದ ಮರಣೋತ್ತರ ಪರೀಕ್ಷೆ ಮುಗಿದ ನಂತರ ಮೃತನ ದೇಹವನ್ನು ರಸ್ತೆ ಮೇಲೆ ಇಟ್ಟು ಪಂಚಶೀಲ ನಗರ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರಾದರೂ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು, ಅವರ ಮನೆಯೊಬ್ಬರಿಗೆ ಸರ್ಕಾರಿ ನೌಕರಿ ಕೊಡುವಂತೆ ಹಾಗೂ ರಸ್ತೆ ಮೇಲೆ ಸ್ಪೀಡ್ ಬ್ರೇಕರ್ ಅಳವಡಿಸುವಂತೆ ಸ್ಥಳೀಯರು ಆಗ್ರಹಿಸಿದರು. ಪ್ರಕರಣ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.