ಕಲಬುರಗಿ : ಮಹದಾಯಿ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ವಿಚಾರವಾಗಿ ನಾವು ಹಿಂದೆ ಅಧಿಕಾರದಲ್ಲಿದ್ದಾಗಲೂ ಚರ್ಚೆ ಮಾಡಿದ್ದೇವೆ. ಆದರೂ ಗೋವಾ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕಿದ್ರೆ ಮಹದಾಯಿ ಇತ್ಯರ್ಥ.. ಮಲ್ಲಿಕಾರ್ಜುನ್ ಖರ್ಗೆ
ನಾವೂ ಸಹ ಅಧಿಕಾರದಲ್ಲಿದಾಗ ಮಹದಾಯಿ ಕುರಿತು ಚರ್ಚೆ ಮಾಡಿದ್ದೇವೆ. ಗೋವಾಗೆ ಬಹಳಷ್ಟು ನೀರು ಹರಿದು ಹೋಗುತ್ತಿದೆ. ಕುಡಿಯುಲು ಹಾಗೂ ನೀರಾವರಿಗಾಗಿ 8 ಟಿಎಂಸಿ ನೀರು ಬೀಡುವಂತೆ ಕೇಳಿದ್ದೇವೆ. ಆದರೆ, ಗೋವಾ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ
ಮಹದಾಯಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಮಹದಾಯಿ ಹೋರಾಟ ಕಳೆದ ಹಲವು ವರ್ಷಗಳಿಂದ ನಡೆದಿದೆ. ನಾವೂ ಸಹ ಅಧಿಕಾರದಲ್ಲಿದಾಗ ಮಹಾದಾಯಿ ಕುರಿತು ಚರ್ಚೆ ಮಾಡಿದ್ದೇವೆ. ಗೋವಾಗೆ ಬಹಳಷ್ಟು ನೀರು ಹರಿದು ಹೋಗುತ್ತಿದೆ. ಕುಡಿಯುಲು ಹಾಗೂ ನೀರಾವರಿಗಾಗಿ 8 ಟಿಎಂಸಿ ನೀರು ಬೀಡುವಂತೆ ಕೇಳಿದ್ದೇವೆ. ಆದರೆ, ಗೋವಾ ಸರ್ಕಾರ ಗಮನ ಹರಿಸುತ್ತಿಲ್ಲ.
ಪ್ರತಿಭಟನಾನಿರತ ರೈತರಿಗೆ ರಾಜ್ಯಪಾಲರನ್ನು ಭೇಟಿ ಮಾಡುವ ಅವಕಾಶ ಕೋಡಬೇಕು. ಇನ್ನು, ಇದು ಇಡೀ ರಾಜ್ಯದ ಸಮಸ್ಯೆಯಾಗಿದೆ. ಎಲ್ಲರೂ ಪಕ್ಷಾತೀತವಾಗಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದರು.
Last Updated : Oct 19, 2019, 6:30 PM IST