ಕಲಬುರಗಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದು, ಜನ್ಮ ದಿನದಂದು ಕೊರೊನಾ ಸೋಂಕಿತರಿಗೆ ನೆರವಾಗಿದ್ದಾರೆ.
ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಸೋಂಕಿತರಿಗೆ ಬೆಡ್ ವ್ಯವಸ್ಥೆ ಮಾಡಬೇಕಾದ ಸರ್ಕಾರ ಕೈಕಟ್ಟಿಕುಳಿತಿದೆ. ಇದನ್ನು ಮನಗಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಕಲಬುರಗಿ ಘಟಕ ಜಿಲ್ಲೆಗೆ 550 ಬೆಡ್ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಪ್ರತಿ ವರ್ಷ ಬೆಂಗಳೂರು ನಿವಾಸದಲ್ಲಿ ಅವರ ಅಭಿಮಾನಿಗಳು ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಈ ಬಾರಿ ದೇಶದ ಜನ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವುದರಿಂದ ಖರ್ಗೆ ಅವರ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದರು.
ಕೋವಿಡ್ ಆಸ್ಪತ್ರೆಗೆ ನೀಡಲಾದ ಬೆಡ್ಗಳು ಅಲ್ಲದೆ ತಮ್ಮ ಅಭಿಮಾನಿಗಳಿಗೆ ಕೊರೊನಾ ಸಂಕಷ್ಟದಲ್ಲಿರುವರಿಗೆ ಹಾಗೂ ಬಡವರಿಗೆ ಸಹಾಯ ಮಾಡುವಂತೆ ಕರೆ ಕೊಟ್ಟಿದ್ದರು. ಚಿತ್ತಾಪುರ ಮತ್ತು ಕಲಬುರಗಿ ನಗರಗಳಿಗೆ ಬೆಡ್ಗಳು ಬಂದು ತಲುಪಿವೆ. ಇನ್ನು ಹುಟ್ಟುಹಬ್ಬದಂದೆ ಕೋವಿಡ್ ರೋಗಿಗಳ ಸೇವೆಗೆ ಬೆಡ್ಗಳ ಹಸ್ತಾಂತರಿಸಲಾಗಿದೆ.
ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ಇದು ಚಿತ್ತಾಪುರ ಮಾಡಲ್ ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರದ ಕಿವಿಹಿಂಡಿದ್ದಾರೆ. ಸೋಂಕಿತರಿಗೆ ನೆರವಾಗಲಿ ಎಂದು ಪರಿಸರ ಸ್ನೇಹಿ ಬೆಡ್ಗಳನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ವತಿಯಿಂದ ನೀಡಲಾಗಿದೆ.
ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆ ಬೆಡ್ಗಳ ಕೊರತೆ ನಿಗಿಸಿಸುವ ಉದ್ದೇಶದಿಂದ ಕೈಲಾದಷ್ಟು ನೆರವು ನೀಡಲೆಂದು ಸದ್ಯಕ್ಕೆ 650 ಬೆಡ್ಗಳ ದೇಣಿಗೆ ರೂಪದಲ್ಲಿ ನೀಡಲಾಗಿದೆ. ಕಲಬುರ್ಗಿ ಜಿಲ್ಲೆಗೆ 550 ಹಾಗೂ ರಾಯಚೂರು ಜಿಲ್ಲೆಗೆ 100 ಬೆಡ್ಗಳನ್ನು ನೀಡಲಾಗಿದೆ.
ಚಿತ್ತಾಪುರದ ಕೋವಿಡ್ ಕೇಂದ್ರಕ್ಕೂ 100 ಬೆಡ್ ಒದಗಿಸಲಾಗಿದೆ. ಚಿತ್ತಾಪುರ ಮಾಡೆಲ್ ಅವಲೋಕಿಸಿ ರಾಜ್ಯದಲ್ಲಿ ತಲೆದೋರಿದ ಬೆಡ್ ಕೊರತೆ ನೀಗಿಸುವಂತೆ ಹಾಗೂ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಗ್ರಹಿಸಿದ್ದಾರೆ.