ಕರ್ನಾಟಕ

karnataka

ETV Bharat / state

ಇಂದ್ರ, ಚಂದ್ರ ಎಂದು ಹೊಗಳಿದ್ದವರಿಂದಲೇ ನನ್ನ ವಿರುದ್ಧ ಷಡ್ಯಂತ್ರ: ಖರ್ಗೆ - ಉಮೇಶ್ ಜಾದವ್

ಮಲ್ಲಿಕಾರ್ಜುನ್ ಖರ್ಗೆ ಅವರಿಂದ ಬಿರುಸಿನ ಪ್ರಚಾರ. ಬಾಬುರಾವ್ ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ ಹಾಗೂ ಉಮೇಶ್ ಜಾಧವ್​​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಕಾಂಗ್ರೆಸ್ ನಾಯಕ. 11 ಬಾರಿ ಗೆಲ್ಲಿಸಿದ್ದೀರಿ, ಇನ್ನೊಂದು ಸಲ ಗೆಲ್ಲಿಸಿ ಎಂದು ಖರ್ಗೆ ಮನವಿ.

ಮಲ್ಲಿಕಾರ್ಜುನ್ ಖರ್ಗೆ

By

Published : Apr 15, 2019, 8:59 AM IST

Updated : Apr 15, 2019, 1:08 PM IST

ಯಾದಗಿರಿ: ಅಂದು ಇಂದ್ರ, ಚಂದ್ರ ಎಂದು ಹಾಡಿ ಹೊಗಳಿದ ಕೆಲವು ವ್ಯಕ್ತಿಗಳು ಇದೀಗ ಬೆಳೆದು, ನನ್ನನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಬಾಬುರಾವ್ ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ ಹಾಗೂ ಉಮೇಶ್ ಜಾಧವ್​ಗೆ ಕಾಂಗ್ರೆಸ್​ ಸಂಸದಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಟಾಂಗ್ ನೀಡಿದ್ದಾರೆ.

ಯಾದಗಿರಿ ಜಿಲ್ಲೆಯ ಕಲಬುರಗಿ ಲೋಕಸಭಾ ಕ್ಷೇತ್ರವಾದ ಗುರುಮಿಠಕಲ್ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಪ್ರಚಾರದ ವೇಳೆ ಖರ್ಗೆ ಮಾತನಾಡಿದರು. ಕಾಂಗ್ರೆಸ್​​ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿ ನನ್ನನ್ನು ಸೋಲಿಸಲು ಸಂಘ ಕಟ್ಟಿಕೊಂಡಿರುವ ಇವರು ಯಾವ ಕಾಲಕ್ಕೂ ನನ್ನನ್ನು ಸೋಲಿಸಲು ಆಗುವುದಿಲ್ಲ ಎಂದರು.

ದಿಲ್ಲಿಯಿಂದ ಗಲ್ಲಿಯವರೆಗೂ ನನ್ನನ್ನು ಸೋಲಿಸಲು ಪ್ರಯತ್ನ ನಡೆಸಿದ್ದಾರೆ. ಆದ್ರೆ ಗಲ್ಲಿಯವರು ಆವಾಜ್ ಮಾಡಿ ಸೋಲಿಸಕ್ಕಾಗದೆ ಶಾಂತರಾಗುತ್ತಾರೆ. ದಿಲ್ಲಿಯವರು ನನ್ನನ್ನು ಸೋಲಿಸಲು ಇವರನ್ನು ನೇಮಕ ಮಾಡಿಕೊಂಡಿದ್ದಾರೆ. ಏಕೆಂದ್ರೆ ಸಂಸತ್ತಿನಲ್ಲಿನನ್ನ ಪ್ರಶ್ನೆಗೆ ಉತ್ತರ ಕೊಡಲು ಒದ್ದಾಡುತ್ತಿದ್ದಾರೆ. ಹೇಗಾದರೂ ಮಾಡಿ ನನ್ನನ್ನು ಸೋಲಿಸಬೇಕೆಂದು ಗಲ್ಲಿಯಲ್ಲಿ ಆವಾಜ್ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಖರ್ಗೆ ವ್ಯಂಗವಾಡಿದ್ದಾರೆ.

ನಿಮ್ಮ ಆಶೀರ್ವಾದದಿಂದ 11 ಬಾರಿ ಗೆದ್ದಿದ್ದೇನೆ. ಈ ಬಾರಿ ಮತ್ತೊಂದು ಅವಕಾಶ ನೀಡಿ ಗೆಲ್ಲಿಸಿ. ನಿಮ್ಮ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡುವುದಿಲ್ಲ. ಗುರುಮಿಠಕಲ್ ಭಾಗದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕಲಬರಗಿ ಕ್ಷೇತ್ರಕ್ಕೆ ಕೇಂದ್ರೀಯ ವಿದ್ಯಾಲಯ, ಇಎಸ್​ಐ ಆಸ್ಪತ್ರೆ, ಜಯದೇವ ಆಸ್ಪತ್ರೆ ಹೀಗೆ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದೇನೆ, ಮುಂದೆಯೂ ಮಾಡುವೆ ಎಂದರು.

Last Updated : Apr 15, 2019, 1:08 PM IST

ABOUT THE AUTHOR

...view details