ಕರ್ನಾಟಕ

karnataka

ETV Bharat / state

ಟಿಕ್​​​ಟಾಕ್​ ಲೈಕ್ಸ್​​​ಗಾಗಿ ಕಲಬುರಗಿಯಲ್ಲಿ ದುಷ್ಕೃತ್ಯ... ವಿಡಿಯೋ ವೈರಲ್​ ಆದಾಗ ಸಿಕ್ಕಿಬಿದ್ದ ಕಿಡಿಗೇಡಿಗಳು - ಟಿಕ್​​​ಟಾಕ್​​​ ಲೆಟೆಸ್ಟ್ ನ್ಯೂಸ್

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚಿನ ಲೈಕ್ಸ್​​ ಪಡೆಯಲು ಕೆಲವರು ಇನ್ನಿಲ್ಲ ಸರ್ಕಸ್​ಗಳನ್ನು ಮಾಡುತ್ತಾರೆ. ಕಲಬುರಗಿ ಜಿಲ್ಲೆಯಲ್ಲಿ ಆರು ಮಂದಿ ಯುವಕರು ಮುಳ್ಳು ಹಂದಿಯನ್ನು ಕೊಂದು ರಕ್ತ ನೋಡದೆ ನಾವು ನಿದ್ದೆ ಮಾಡಲ್ಲ ಎಂಬ ಹಾಡಿನೊಂದಿಗೆ ಪ್ರಚೋದನಾತ್ಮಕ ಟಿಕ್​​ಟಾಕ್ ಮಾಡಿ ಹರಿಬಿಟ್ಟಿದ್ದರು. ಈಗ ವಿಡಿಯೋ ವೈರಲ್​ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Made a tiktok by killing a porcupine: 2 arrested
ಟಿಕ್​​​ಟಾಕ್​​​ನಲ್ಲಿ ಹೆಚ್ಚಿನ ಲೈಕ್ಸ್​​​ಗಾಗಿ ಇವ್ರೇನ್​ ಮಾಡಿದ್ರು ಗೊತ್ತಾ? ವಿಡಿಯೋ!

By

Published : May 23, 2020, 10:54 AM IST

ಕಲಬುರಗಿ:ಲೈಕ್ಸ್​​ಗಾಗಿ ಮುಳ್ಳುಹಂದಿಯನ್ನು ಬೇಟೆಯಾಡಿ ಟಿಕ್​​ಟಾಕ್ ಮಾಡಿದ್ದ ಭೂಪರನ್ನು ಅರಣ್ಯಾಧಿಕಾರಿಗಳು ಹಿಡಿದು ಕಂಬಿ ಹಿಂದೆ ತಳ್ಳಿದ್ದಾರೆ. ಉಳಿದ ನಾಲ್ವರ ಬಂಧನಕ್ಕೆ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.

ಮುಳ್ಳುಹಂದಿಯನ್ನು ಬೇಟೆಯಾಡಿ ಟಿಕ್​​ಟಾಕ್ ಮಾಡಿದರು ಪೊಲೀಸರ ಅತಿಥಿ

ತಾಲೂಕಿನ ಬೋಳೆವಾಡ ಗ್ರಾಮದ ಅಂಬರೀಶ್ ನಾಯಕೋಡಿ ಮತ್ತು ನಾಗೇಶ್ ಬಂಧಿತರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಮುಳ್ಳು ಹಂದಿ ಬೇಟೆಯಾಡಿ ಚಿತ್ರಹಿಂಸೆ ನೀಡಿ ಕೊಂದಿದ್ದ ಆರೋಪಿಗಳು, ರಕ್ತ ನೋಡದೆ ನಾವು ನಿದ್ದೆ ಮಾಡಲ್ಲ ಎಂಬ ಹಾಡಿನೊಂದಿಗೆ ಪ್ರಚೋದನಾತ್ಮಕ ಟಿಕ್​​ಟಾಕ್ ಮಾಡಿ ಹರಿಬಿಟ್ಟಿದ್ದರು.

ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅರಣ್ಯ ಇಲಾಖೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು, ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧಿಸಿ ಕಂಬಿಹಿಂದೆ ತಳ್ಳಿದ್ದಾರೆ. ಇನ್ನೂ ತಲೆಮರೆಸಿಕೊಂಡಿರುವ ನಾಲ್ವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details