ಕಲಬುರಗಿ : ಲಗೇಜು ಆಟೋದಲ್ಲಿ ಕಬ್ಬಿಣದ ಪೈಪ್ ತುಂಬಿಕೊಂಡು ಹೋಗುತ್ತಿದ್ದಾಗ ವಾಹನದಲ್ಲಿದ್ದ ಕಬ್ಬಿಣದ ಪೈಪ್ ವಿದ್ಯುತ್ ತಂತಿಗೆ ತಗುಲಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಆಳಂದ ಚೆಕ್ ಪೋಸ್ಟ್ ಬಳಿ ನಡೆದಿದೆ. ಮೃತ ಚಾಲಕನನ್ನು ಶೇಖ್ ರೋಜಾ ಬಡಾವಣೆ ನಿವಾಸಿ ಪ್ರಭುಲಿಂಗ ಕೋತಲಿ ಎಂದು ಗುರುತಿಸಲಾಗಿದೆ.
ಪ್ರಭುಲಿಂಗ ಅವರು ತನ್ನ ಲಗೇಜು ಆಟೋದಲ್ಲಿ ಉದ್ದನೆಯ ಕಬ್ಬಿಣದ ಪೈಪ್, ಸಲಾಕೆ ಮತ್ತು ತಗಡುಗಳನ್ನು ತುಂಬಿಕೊಂಡು ನೆಹರೂ ಗಂಜ್ ನಿಂದ ಆಳಂದ ಚೆಕ್ಪೋಸ್ಟ್ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭ ವಾಹನದಲ್ಲಿದ್ದ ಕಬ್ಬಿಣಕ್ಕೆ ವಿದ್ಯುತ್ ತಂತಿ ತಗಲಿದ್ದು, ಪರಿಣಾಮ ಚಾಲಕ ಪ್ರಭುಲಿಂಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.