ಕರ್ನಾಟಕ

karnataka

ETV Bharat / state

ಕಲಬುರಗಿ ಜಿಲ್ಲೆಯಲ್ಲಿ ದುಡುಕಿದ ಲವರ್ಸ್​​: ಮರದ ಟೊಂಗೆಯಲ್ಲಿ ನೇಣು ಹಾಕಿಕೊಂಡ ಪ್ರೇಮಿಗಳು! - Lovers committed suicide

ಫೆ. 11ರಂದು ಮನೆ ಬಿಟ್ಟು ಹೋಗಿದ್ದ ಪ್ರೇಮಿಗಳಿಬ್ಬರು, ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ತಮ್ಮಿಬ್ಬರಿಗೆ ಮದುವೆ ಮಾಡಿಸುವುದು ತಡವಾಯಿತು ಎಂದು ದುಡುಕಿದ ಯುವಜೋಡಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

lover-commited-sucide-in-kalaburagi
ಒಂದೇ ಮರದ ಟೊಂಗೆಗೆ ಕೊರಳೊಡ್ಡಿದ ಪ್ರೇಮಿಗಳು!

By

Published : Feb 16, 2021, 11:15 AM IST

ಕಲಬುರಗಿ:ಪ್ರೇಮಿಗಳಿಬ್ಬರು ಮರದ ಟೊಂಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಡ್ರಾಮಿ ತಾಲೂಕಿನ ಅಖಂಡಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮಾನಶಿವಣಗಿ ಗ್ರಾಮದ ಪರಶುರಾಮ ಪೂಜಾರಿ (23) ಹಾಗೂ ಭಾಗ್ಯಶ್ರೀ ಒಡೆಯರ್ (18) ಆತ್ಮಹತ್ಯೆ ಮಾಡಿಕೊಂಡವರು. ಫೆ. 11ರಂದು ಮನೆ ಬಿಟ್ಟು ಹೋಗಿದ್ದ ಪ್ರೇಮಿಗಳು, ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇಬ್ಬರೂ ಸಂಬಂಧಿಕರೇ ಆಗಿದ್ದು, ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಪರುಶುರಾಮ ಕೃಷಿ ಕೆಲಸ ಹಾಗೂ ಭಾಗ್ಯಶ್ರೀ ಪಿಯುಸಿ ಓದುತ್ತಿದ್ದಳು. ಇಬ್ಬರ ನಡುವೆ ಕೆಲ ವರ್ಷಗಳ ಹಿಂದೆಯೇ ಪ್ರೇಮಾಂಕುರವಾಗಿತ್ತು. ಪರಶುರಾಮನೊಂದಿಗೆ ಮದುವೆಯಾಗುವುದಾಗಿ ಯುವತಿ ಪಟ್ಟು ಹಿಡಿದಿದ್ದಳು. ಪರಶುರಾಮ ಭಾಗ್ಯಶ್ರೀಯ ಸೋದರತ್ತೆ ಮಗನಾದ ಕಾರಣ ಮನೆಯ ಹಿರಿಯರು ಚರ್ಚಿಸಿ, ಆದಷ್ಟು ಬೇಗ ನಿಶ್ಚಿತಾರ್ಥ ಮಾಡಿದರಾಯಿತು. ಮದುವೆ ಸ್ವಲ್ಪ ತಡವಾಗಿ ಮಾಡಿದರಾಯ್ತು ಎಂದು ನಿರ್ಧರಿಸಿದ್ದರು‌. ಆದರೆ, ಮದುವೆ ಏಕೆ ತಡ ಮಾಡುತ್ತೀರಿ ಎಂದು ಬೇಸರಗೊಂಡು ಪ್ರೇಮಿಗಳಿಬ್ಬರು ಫೆ. 11ರಂದು ಮನೆ ಬಿಟ್ಟು ಹೋಗಿದ್ದರು ಎಂದು ಮೃತಳ ತಂದೆ ದೂರಿನಲ್ಲಿ ತಿಳಿಸಿದ್ದಾರೆ‌.

ಓದಿ:ಮೈಸೂರಲ್ಲಿ ಬೀದಿ ನಾಯಿ ಮೇಲೆ ಅತ್ಯಾಚಾರ: ಕಾಮುಕನಿಗೆ ಅಗ್ನಿ ಪರೀಕ್ಷೆಯಾದ ಶ್ವಾನದ ವೈದ್ಯಕೀಯ ಪರೀಕ್ಷೆ

ಮದುವೆ ಮಾಡುವುದಾಗಿ ಹೇಳಿ, ಬಳಿಕ ತಮ್ಮನ್ನು ದೂರ ಮಾಡಬಹುದು ಎಂಬ ಸಂದೇಹದಿಂದ ಪ್ರೇಮಿಗಳು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರೀಶಿಲನೆ ಮಾಡಿದ್ದಾರೆ. ಈ ಕುರಿತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details