ಕರ್ನಾಟಕ

karnataka

ETV Bharat / state

ಪ್ರೇಯಸಿ ಸಾವಿನಿಂದ ಮನನೊಂದು ರೈಲು ಹಳಿಗೆ ತಲೆ ಕೊಟ್ಟ ಪ್ರಿಯಕರ! - ಕಲಬುರಗಿ

ಪ್ರೇಯಸಿ ಸಾವಿನಿಂದ ಮನನೊಂದು ರೈಲು ಹಳಿಗೆ ತೆಲೆ ಕೊಟ್ಟು ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯ ಬಿದ್ದಾಪುರ ರೈಲ್ವೆ ಹಳಿ ಬಳಿ ನಡೆದಿದೆ.

ಹನುಮಂತ ಮೇಳಕುಂದಾ

By

Published : May 30, 2019, 12:49 AM IST

ಕಲಬುರಗಿ:ಪ್ರೇಯಸಿ ಸಾವಿನಿಂದ ಮನನೊಂದು ರೈಲು ಹಳಿಗೆ ತೆಲೆ ಕೊಟ್ಟು ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯ ಬಿದ್ದಾಪುರ ರೈಲ್ವೆ ಹಳಿ ಬಳಿ ನಡೆದಿದೆ.

ಹನುಮಂತ ಮೇಳಕುಂದಾ (26) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಹನುಮಂತ, ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಕಳೆದೊಂದು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತ ಪ್ರಣಯ ಪಕ್ಷಿಗಳಂತೆ ಹಾರಾಡಿಕೊಂಡಿದ್ದರು.

ರೈಲ್ವೆ ಹಳಿಗೆ ತಲೆ ಕೊಟ್ಟ ಯುವಕ

ಆದ್ರೆ ಇವರ ಪ್ರೀತಿ ವಿಷಯ ಯುವತಿಯ ಪೋಷಕರಿಗೆ ಗೊತ್ತಾಗಿ ಅಡ್ಡಿಪಡಿಸಿದ್ದರಂತೆ. ಅಲ್ಲದೆ ಬೇರೆಯೊಬ್ಬನ ಜೊತೆ ಯುವತಿಯ ಮದುವೆಗೆ ನಿಶ್ಚಯಿಸಿದ್ದರಂತೆ. ಪೋಷಕರ ನಿರ್ಧಾರದಿಂದ ಬೇಸತ್ತ ಯುವತಿ ಮೇ 27 ರಂದು ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದುಬಂದಿದೆ.

ಪ್ರೇಯಸಿ ಸಾವನ್ನಪ್ಪಿರುವ ವಿಷಯ ಅರಗಿಸಿಕೊಳ್ಳಲು ಆಗದ ಯುವಕ ಆಕೆ ಸಾವನ್ಮಪ್ಪಿದ ಎರಡೇ ದಿನದಲ್ಲಿ ಮನನೊಂದು ತಾನೂ ರೈಲು ಹಳಿಗೆ ತೆಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರೊಂದಿಗೆ ಯುವ ಪ್ರೇಮಿಗಳು ದಾರುಣ ಅಂತ್ಯ ಕಂಡಿದ್ದಾರೆ.ಇನ್ನು ಯುವಕನ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details