ಕರ್ನಾಟಕ

karnataka

By

Published : Jan 22, 2021, 8:20 AM IST

Updated : Jan 22, 2021, 8:49 AM IST

ETV Bharat / state

ಆಧಾರ್​ ಕಾರ್ಡ್​ ತಿದ್ದುಪಡಿ ಕೇಂದ್ರಗಳಿಗೆ ಮುಗಿಬಿದ್ದ ಜನತೆ: ಕಾದು ಕಾದು ಸುಸ್ತಾದ ಜನರು

ಕಲಬುರಗಿಯಲ್ಲಿ ಮೂರು ಕಡೆಗಳಲ್ಲಿ ಆಧಾರ್​ ಕಾರ್ಡ್​ ತಿದ್ದುಪಡಿ ಕಾರ್ಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಜನರು ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ.

ಆಧಾರ್​ ಕಾರ್ಡ್​ ತಿದ್ದುಪಡಿ ಕೇಂದ್ರಗಳಿಗೆ ಮುಗಿಬಿದ್ದ ಜನತೆ
Lot people going adhar centre for correction the card in Kalaburagi

ಕಲಬುರಗಿ: ಮೊದಲು ಖಾಸಗಿ ಸೆಂಟರ್​​​ಗಳಲ್ಲಿ ಆಧಾರ್​​​​ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸುರಕ್ಷತೆಯ ದೃಷ್ಟಿಯಿಂದ ಯುಐಡಿಎಐ ಆದೇಶದ ಅನ್ವಯ ಖಾಸಗಿ ಕೇಂದ್ರಗಳ ಅನುಮತಿ ಹಿಂಪಡೆದು ಸರ್ಕಾರಿ ಆಧಾರ ಕೇಂದ್ರಗಳಲ್ಲಿ ಮಾತ್ರ ತಿದ್ದುಪಡಿ ಕಾರ್ಯ ನಡೆದಿದೆ. ಇದರಿಂದ ಆಧಾರ್​ ಕಾರ್ಡ್​ ಮಾಡಿಸುವ ಸೆಂಟರ್​ನಲ್ಲಿ ಜನದಟ್ಟಣೆ ಹೆಚ್ಚಾಗುವಂತೆ ಮಾಡಿದೆ.

ಆಧಾರ್​ ಕಾರ್ಡ್​ ತಿದ್ದುಪಡಿ ಕೇಂದ್ರಗಳಿಗೆ ಮುಗಿಬಿದ್ದ ಜನತೆ:

ಬಸ್​​​ಪಾಸ್ ಸೇರಿದಂತೆ ಯಾವುದೊಂದು ಯೋಜನೆಯ ಲಾಭ ಪಡೆಯಬೇಕಾದರೆ ಆಧಾರ ಕಾರ್ಡ್, ಗುರುತಿನ ಚೀಟಿ ಕಡ್ಡಾಯವಾಗಿದೆ. ಹಾಗಾಗಿ ಆಧಾರ್​ ಕೇಂದ್ರಗಳಲ್ಲಿ ಸರಿಪಡಿಸುವವರು, ಹೊಸದಾಗಿ ಕಾರ್ಡ್ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಮುಂಚೆ ಖಾಸಗಿ ಸೆಂಟರ್​ಗಳಲ್ಲಿ ಆಧಾರ್​ ತಿದ್ದುಪಡಿ ಮಾಡಲಾಗುತ್ತಿತ್ತು. ಆದರೆ, ಸುರಕ್ಷತೆಯ ಹಿನ್ನೆಲೆಯಲ್ಲಿ ಖಾಸಗಿ ಕೇಂದ್ರಗಳಿಗೆ ಕೊಟ್ಟಿದ್ದ ಅನುಮತಿ ಹಿಂಪಡೆದು, ಸರ್ಕಾರಿ ಆಧಾರ ಕೇಂದ್ರಗಳಲ್ಲಿ ಮಾತ್ರ ತಿದ್ದುಪಡಿ ಅಥವಾ ಹೊಸ ಕಾರ್ಡ್ ಮಾಡುವ ಕಾರ್ಯ ನಡೆದಿದೆ. ಇದರಿಂದ ಸೆಂಟರ್​ಗಳಿಗೆ ತೆರಳುವವರ ಸಂಖ್ಯೆಯಲ್ಲಿ ಹೆಚ್ಚಾಗಿದೆ.

ಸದ್ಯ ನಗರದಲ್ಲಿ ಮೂರು ಕಡೆಗಳಲ್ಲಿ ಆಧಾರ್​​ ಕೇಂದ್ರ ತೆರೆಯಲಾಗಿದೆ. ಮಿನಿ ವಿಧಾನ ಸೌಧ, ಸೂಪರ್ ಮಾರ್ಕೇಟ್​​​ ಗುಲಬರ್ಗ ಒನ್ ಕೇಂದ್ರ ಹಾಗೂ ಖರ್ಗೆ ಬಂಕ್ ಕೆಎಚ್‌ಬಿ ಕಾಂಪ್ಲೇಕ್ಸ್​​ನಲ್ಲಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ತಿದ್ದುಪಡಿ, ಹೊಸ ಕಾರ್ಡ್ ಮಾಡುವುದು ಸೇರಿ ಪ್ರತಿ ಕೇಂದ್ರದಲ್ಲಿ ತಲಾ 30 ರಂತೆ ನಿತ್ಯ 90 ರಿಂದ 100 ಜನರ ಆಧಾರ್​ ಸಂಬಂಧಿತ ಕೆಲಸ ಮಾಡಿ ಕೊಡಲಾಗುತ್ತಿದೆ.

ಓದಿ: ಶಿವಮೊಗ್ಗ: ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ... ಎಂಟು ಸಾವು, ಮೃತರ ಸಂಖ್ಯೆ ಹೆಚ್ಚಾಗುವ ಶಂಕೆ!

ಬಹುತೇಕ ವಿಳಾಸ ಬದಲಾವಣೆ, ಜನ್ಮ ದಿನಾಂಕ ಬದಲಾವಣೆ, ಮೊಬೈಲ್​ ನಂಬರ್​ ಬದಲಾವಣೆ ಕುರಿತ ಸಮಸ್ಯೆಗಳ ನಿವಾರಣೆ ಜನರು ಆಧಾರ್​ ಕೇಂದ್ರಗಳಿಗೆ ಹೋಗುತ್ತಿದ್ದಾರೆ. ನಿತ್ಯ ಬೆಳಗ್ಗೆ ಏಳು ಗಂಟೆಗೆ 30 ಜನರಿಗೆ ಟೋಕನ್ ನೀಡಲಾಗುತ್ತದೆ. ಟೋಕನ್ ಪಡೆದವರು ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತಿದೆ. ಒಂದು ಚಿಕ್ಕ ತಿದ್ದುಪಡಿ ಇದ್ದರೂ ಕೆಲಸ ಕಾರ್ಯ ಬಿಟ್ಟು ಆಧಾರ್​ ಕೇಂದ್ರ ಕಾಯುವುದು ಅನಿವಾರ್ಯವಾಗಿದೆ ಎಂದು ಜನರು ಅಸಮಾಧಾನ ಹೊರ ಹಾಕಿದ್ದಾರೆ.

Last Updated : Jan 22, 2021, 8:49 AM IST

ABOUT THE AUTHOR

...view details