ಕರ್ನಾಟಕ

karnataka

ETV Bharat / state

ಟೈಯರ್ ಸಿಡಿದು ಬಸ್​ಗೆ ಲಾರಿ ಡಿಕ್ಕಿ: 40 ಪ್ರಯಾಣಿಕರು ಪಾರು, ಕೆಲವರಿಗೆ ಗಾಯ - kalburgi crime news

ಕಲ್ಲು ತುಂಬಿಕೊಂಡು ಹೊರಟಿದ್ದ ವೇಳೆ ಲಾರಿ ಚಕ್ರ ಬ್ಲಾಸ್ಟ್ ಆಗಿ ಎದುರುಗಡೆ ಬರುತ್ತಿದ್ದ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್​ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

lorry collided with bus in gulbarga
ಟೈಯರ್ ಸಿಡಿದು ಬಸ್​ಗೆ ಲಾರಿ ಡಿಕ್ಕಿ

By

Published : Feb 25, 2021, 4:36 PM IST

ಕಲಬುರಗಿ: ಟೈಯರ್ ಸಿಡಿದ ಪರಿಣಾಮ ಲಾರಿಯು ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಕೂದಲೆಳೆ ಅಂತರದಲ್ಲಿ 40 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿತ್ತಾಪುರ ತಾಲೂಕಿನ ರಾವೂರ್ ಬಳಿ ನಡೆದಿದೆ.

ಕಲ್ಲು ತುಂಬಿಕೊಂಡು ಹೊರಟಿದ್ದ ವೇಳೆ ಲಾರಿ ಚಕ್ರ ಬ್ಲಾಸ್ಟ್ ಆಗಿ ಎದುರುಗಡೆ ಬರುತ್ತಿದ್ದ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಹಾಗೂ ಲಾರಿಯ ಚಾಲಕ , ನಿರ್ವಾಹಕ ಸೇರಿ ಏಳು ಜನರಿಗೆ ಗಂಭೀರ ಗಾಯಗಳಾಗಿವೆ.

ಸದ್ಯ ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಹಾಗೂ ಲಾರಿಯ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಬಸ್ ನಲ್ಲಿ 40 ಜನ ಪ್ರಯಾಣಿಕರಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ABOUT THE AUTHOR

...view details