ಕಲಬುರಗಿ:ಲೋಕಸಭಾ ಚುನಾವಣೆ 'ಶೋಲೆ' ಸಿನಿಮಾದಂತಿತ್ತು. ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ 'ಗಬ್ಬರ್ ಸಿಂಗ್' ಆದ್ರೆ, ಶರಣಪ್ರಕಾಶ ಪಾಟೀಲ 'ಸಾಂಬಾ' ಆಗಿದ್ದರು ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ವ್ಯಂಗ್ಯವಾಡಿದ್ದಾರೆ.
ಲೋಕಸಭೆ ಚುನಾವಣೆ 'ಶೋಲೆ' ಸಿನಿಮಾದಂತಿತ್ತು! ಮಾಲಿಕಯ್ಯ ಗುತ್ತೇದಾರ್ ವ್ಯಂಗ್ಯ - kannadanews
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್‌ನ್ನು ಸರ್ವನಾಶ ಮಾಡಿ ಬಿಜೆಪಿಯನ್ನು ಗೆಲ್ಲಿಸಿದ್ದೇವೆ ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿದ್ದಾರೆ.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೀದರ್ ಕಲಬುರಗಿ ನೂತನ ಸಂಸದರು ಹಾಗೂ ಚಿಂಚೋಳಿ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶೋಲೆ ಫಿಲ್ಮ್ನಲ್ಲಿರುವಂತೆ ಲೋಕಸಭಾ ಚುನಾವಣೆಯಲ್ಲಿ ನಾನು 'ಅಮಿತಾಬ್ ಬಚ್ಚನ್', ಬಾಬುರಾವ ಚಿಂಚನಸೂರ 'ಧರ್ಮೇಂದ್ರ' ಇದ್ದಂತೆ ನಾಯಕರಾಗಿ ಕೆಲಸ ಮಾಡಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಚೇಲಾಗಳು ಎಷ್ಟು ದುಡ್ಡು ಚೆಲ್ಲಿದರೂ ಗೆಲ್ಲಲಾಗಲಿಲ್ಲ, ಸೋಲಿಲ್ಲದ ಸರದಾರನಿಗೆ ಸೋಲುಣಿಸಿದ್ದೇವೆ ಎಂದು ಹೇಳಿದರು.
ಅಲ್ಲದೇ ದುರ್ಯೋಧನನ ಕ್ಷೇತ್ರ ಚಿತ್ತಾಪುರದಲ್ಲಿ ಕಾಂಗ್ರೆಸ್‌ಗೆ ಲೀಡ್ ಕೊಡಲಾಗಲಿಲ್ಲ ಎಂದು ಖರ್ಗೆ ಪುತ್ರ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟ ಗುತ್ತೆದಾರ್, ಚಾಣಕ್ಯನಂತೆ ಪ್ರತಿಜ್ಞೆ ಮಾಡಿ ಖರ್ಗೆ ವಿರುದ್ಧ ಗೆದ್ದಿದ್ದೇವೆ. ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಸರ್ವನಾಶ ಮಾಡಿ, ಬಿಜೆಪಿಯನ್ನು ಗೆಲ್ಲಿಸಿದ್ದೇವೆ ಎಂದು ಅಭಿಪ್ರಾಯಪಟ್ಟರು.