ಕರ್ನಾಟಕ

karnataka

ETV Bharat / state

ಜನರು ಕೊರೊನಾ ಗಂಭೀರತೆ ಅರಿತಿಲ್ಲ, ನಾಳೆಯಿಂದ ಕಠಿಣ ಕ್ರಮ: ಕಲಬುರಗಿ ಡಿಸಿ

ಜನರು ಇನ್ನೂ ಕೂಡ ಕೊರೊನಾ ಗಂಭೀರತೆಯನ್ನ ಅರಿತಿಲ್ಲ. ನಾಳೆಯಿಂದ ಲಾಕ್​ಡೌನ್​​​ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವುದಾಗಿ ಡಿಸಿ ಬಿ.ಶರತ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಆರಂಭದಲ್ಲಿಯೇ ಜಿಲ್ಲೆಯ ಜನರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Lockdown will  more effectively I
ನಾಳೆಯಿಂದ ಲಾಕ್​ಡೌನ್​ ಪರಿಣಾಮಕಾರಿಯಾಗಿ ಜಾರಿ: ಡಿಸಿ ಬಿ.ಶರತ್

By

Published : Mar 24, 2020, 8:14 PM IST

ಕಲಬುರಗಿ: ಜಿಲ್ಲೆಯ ಜನರು ಇನ್ನೂ ಕೂಡ ಕೊರೊನಾ ಗಂಭೀರತೆಯನ್ನ ಅರಿತಿಲ್ಲ. ಸಾಕಷ್ಟು ಜನರು ಅನಾಗರಿಕರಂತೆ ವರ್ತಿಸುತ್ತಿದ್ದು, ಅನಿವಾರ್ಯವಾಗಿ ನಾಳೆಯಿಂದ ಲಾಕ್​ಡೌನ್​ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವುದಾಗಿ ಡಿಸಿ ಬಿ.ಶರತ್​ ಎಚ್ಚರಿಕೆ ನೀಡಿದ್ದಾರೆ.

ನಾಳೆಯಿಂದ ಲಾಕ್​ಡೌನ್​ ಪರಿಣಾಮಕಾರಿಯಾಗಿ ಜಾರಿ: ಡಿಸಿ ಬಿ.ಶರತ್

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಆರಂಭದಲ್ಲಿಯೇ ಜಿಲ್ಲೆಯ ಜನರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನಾನು ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ಜಿಲ್ಲೆಯ ಜನ ಕೊರೊನಾ ಗಂಭೀರತೆಯನ್ನ ಇನ್ನೂ ಅರಿತಿಲ್ಲ. ಈಗಾಗಲೇ ಮಾರಣಾಂತಿಕ ವೈರಸ್​ ಮೂರನೇ ಹಂತದ ಸಮೀಪದಲ್ಲಿದೆ. ಒಂದು ವೇಳೆ ಮೂರನೇ ಹಂತ ತಲುಪಿದ್ರೆ ದೊಡ್ಡ ಬೆಲೆ ತೆರಬೇಕಾಗುತ್ತೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜನರ ವರ್ತನೆಯಿಂದ ಜಿಲ್ಲೆಯಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಅನಗತ್ಯವಾಗಿ ರಸ್ತೆಗಿಳಿಯುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಾಹನಗಳನ್ನ ಸೀಜ್ ಮಾಡಲಾಗುವುದು. ಈ ಎಲ್ಲವುಗಳಿಂದ ಮುಕ್ತಿ ಹೊಂದಬೇಕೆಂದರೆ ಜನರು ಮನೆಯಲ್ಲಿರುವುದೊಂದೇ ಪರಿಹಾರ. ಹಾಗಾಗಿ ಸಾರ್ವಜನಿಕರು ಮನೆ ಬಿಟ್ಟು ಹೊರ ಬಾರದೆ ಸಹಕರಿಸಿ ಎಂದು ಜಿಲ್ಲಾಧಿಕಾರಿ ಬಿ.ಶರತ್​​ ಮನವಿ ಮಾಡಿದ್ದಾರೆ.

ABOUT THE AUTHOR

...view details