ಕಲಬುರಗಿ:ಲಾಕ್‌ಡೌನ್ ನಿಷೇಧಾಜ್ಞೆ ಮಧ್ಯೆ ಹನುಮ ದೇವರ ರಥೋತ್ಸವ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಬರ್ಗಾ ವಲಯ ಅಧಿಕಾರಿ ಅಧಿಕಾರಿಯನ್ನ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಬಿ.ಶರತ್ ಆದೇಶ ಹೊರಡಿಸಿದ್ದಾರೆ.
ಹನುಮ ರಥೋತ್ಸವ ನಡೆಸಿ ಲಾಕ್‌ಡೌನ್ ಉಲ್ಲಂಘನೆ: ನಿಂಬರ್ಗಾ ವಲಯ ಅಧಿಕಾರಿ ಅಮಾನತು - ಹನುಮ ದೇವರ ರಥೋತ್ಸವ
ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಹನುಮ ದೇವರ ರಥೋತ್ಸವ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಬರ್ಗಾ ವಲಯ ಅಧಿಕಾರಿ ಚಂದ್ರಕಾಂತ ಕಾರಬಾರಿಯನ್ನ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಬಿ.ಶರತ್ ಆದೇಶ ಹೊರಡಿಸಿದ್ದಾರೆ.
ಲಾಕ್‌ಡೌನ್ ಉಲ್ಲಂಘನೆ: ನಿಂಬರ್ಗಾ ಸೆಕ್ಟರ್ ಮೆಜಿಸ್ಟ್ರೇಟ್ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ
ಚಂದ್ರಕಾಂತ ಕಾರಬಾರಿ ಅಮಾನತಾದ ಅಧಿಕಾರಿ. ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ಇದೇ ತಿಂಗಳ 16 ರಂದು ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಹನುಮ ರಥೋತ್ಸವ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂರಾರು ಜನ ಭಾಗಿಯಾಗಿದ್ದರು.
ಆದರೆ, ಇದನ್ನ ತಡೆಯಬೇಕಾದ ವಲಯ ಅಧಿಕಾರಿ ಎಂದು ನೇಮಕಗೊಂಡಿದ್ದ ಚಂದ್ರಕಾಂತ ಕಾರಬಾರಿ ಅವರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತೋರಿಸಿದ್ದಾರೆಂಬ ಆರೋಪದ ಮೇಲೆ ಅವರನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.