ಕಲಬುರಗಿ :ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ನಾಳೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿದೆ. ಇತ್ತ ಅಗತ್ಯ ವಸ್ತುಗಳ ಮಾರಾಟ ಹಾಗೂ ಹೋಟೆಲ್, ಬಾರ್ನಲ್ಲಿ ಪಾರ್ಸೆಲ್ ಸೇವೆಗೆ ಅನುಮತಿ ನೀಡಿದ್ದರೂ ಸಹ ಮದ್ಯಪ್ರಿಯರು ಮದ್ಯದಂಗಡಿಗಳ ಮುಂದೆ ಸಾಲಿನಲ್ಲಿ ನಿಂತು ಮದ್ಯ ಖರೀದಿಯಲ್ಲಿ ತೊಡಗಿದ್ದಾರೆ.
ನಗರದ ಟಾನಿಕ್ ವೈನ್ ಶಾಪ್ ಮುಂದೆ ಎಣ್ಣೆಗಾಗಿ ಮದ್ಯಪ್ರಿಯರು ಸಾಲಿನಲ್ಲಿ ನಿಂತಿದ್ದಾರೆ. ನಾಳೆಯಿಂದ ಕಂಪ್ಲೀಟ್ ಲಾಕ್ಡಾನ್ ಇರುವುದರಿಂದ ಇಂದೇ ಮದ್ಯ ಖರೀದಿಸುತ್ತಿದ್ದಾರೆ.