ಕರ್ನಾಟಕ

karnataka

ETV Bharat / state

ಲಾಕ್​​​ಡೌನ್​ ಎಫೆಕ್ಟ್​: ಬೆಳೆದ ಫಸಲು ಮಾರಾಟ ಮಾಡಲಾಗದೆ ಕಂಗಾಲಾದ ರೈತರು - Farmers worried about not being sold Crops

ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆದ ಬೆಳೆ ಮಾರಾಟ ಮಾಡಲು ಆಗದೆ ಕಲಬುರಗಿಯ ರೈತರು ಕಂಗಾಲಾಗಿದ್ದಾರೆ‌. ಲಾಕ್​ಡೌನ್​ ಹಿನ್ನೆಲೆ ಜಮೀನಿಗೆ ಬಂದು ಖರೀದಿ ಮಾಡುತ್ತಿದ್ದ ವರ್ತಕರು ಈಗ ಖರೀದಿಗೆ ಬರುತ್ತಿಲ್ಲ. ಇದರಿಂದ ಲಕ್ಷಾಂತರ ಮೌಲ್ಯದ ಫಸಲು ಹಾಳಾಗುತ್ತಿದ್ದು, ರೈತನನ್ನು ಆತಂಕಕ್ಕೆ ಒಳಗಾಗಿದ್ದಾರೆ.

Farmers worried about not being sold Crops
ಲಾಕ್​ ಡೌನ್​ ಎಫೆಕ್ಟ್​: ಬೆಳೆದ ಫಸಲನ್ನು ಮಾರಾಟ ಮಾಡಲಾಗದೇ ಕಂಗಾಲಾದ ರೈತರು

By

Published : Apr 1, 2020, 6:50 PM IST

ಕಲಬುರಗಿ: ಲಾಕ್​ಡೌನ್ ಹಿನ್ನೆಲೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಮಾರಾಟ ಮಾಡಲು ಆಗದೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ‌.

ಬೆಳೆದ ಫಸಲು ಮಾರಾಟ ಮಾಡಲಾಗದೇ ಕಂಗಾಲಾದ ರೈತರು
ಆಳಂದ ತಾಲೂಕಿನ ದೇವಂತಗಿ ಗ್ರಾಮದ ರೈತ ಸಿದ್ದರಾಮ್ ಪಾಟೀಲ್ ಎಂಬುವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಐದು ಎಕರೆ ಜಮೀನಿನಲ್ಲಿ ಪಪ್ಪಾಯ ಬೆಳೆದಿ‌ದ್ದು, ಭರಪೂರ ಫಸಲು ಬಿಟ್ಟಿದೆ. ಆದ್ರೆ ಹಣ್ಣುಗಳನ್ನು ಬೇರೆಡೆಗೆ ಸಾಗಿಸಿ ಮಾರಾಟ ಮಾಡಲು ಆಗದೆ ಗಿಡದಲ್ಲಿಯೇ ಹಾಳಾಗುತ್ತಿವೆ. ಜಮೀನಿಗೆ ಬಂದು ಖರೀದಿ ಮಾಡುತ್ತಿದ್ದ ವರ್ತಕರು ಈಗ ಖರೀದಿಗೆ ಬರುತ್ತಿಲ್ಲ. ಲಕ್ಷಾಂತರ ಮೌಲ್ಯದ ಫಸಲು ಹಾಳಾಗುತ್ತಿರುವುದು ರೈತನನ್ನು ಆತಂಕಕ್ಕೆ ದೂಡಿದೆ.
ಬೆಳೆದ ಫಸಲು ಮಾರಾಟ ಮಾಡಲಾಗದೇ ಕಂಗಾಲಾದ ರೈತರು
ಇತ್ತ ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ರೈತ ಮಲ್ಲಿಕಾರ್ಜುನ ನಾಗೋಜಿ ಎಂಬುವರು ಎರಡೂವರೆ ಲಕ್ಷ ರೂ. ಖರ್ಚು ಮಾಡಿ ತಮ್ಮ ನಾಲ್ಕು ಎಕರೆ ಭೂಮಿಯಲ್ಲಿ ಚೆಂಡು ಹೂವು ಬೆಳೆದಿದ್ದಾರೆ‌. ಆದ್ರೆ ಸಾಗಾಣಿಕೆ ಕೊರತೆ ಹಾಗೂ ಕೊಳ್ಳುವವರಿಲ್ಲದೆ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.

For All Latest Updates

ABOUT THE AUTHOR

...view details