ಕಲಬುರಗಿ:ಜಿಲ್ಲೆಯನ್ನು ಆರೆಂಜ್ ಝೋನ್ ಎಂದು ಪರಿಗಣಿಸಲಾಗಿದೆ. ಸಲೂನ್ ಶಾಪ್ ಸೇರಿದಂತೆ ಕೆಲ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಾಜೋಳ ಹೇಳಿದ್ದಾರೆ.
ಕಲಬುರಗಿಯಲ್ಲಿ ಮೇ 4 ರಿಂದ ವ್ಯಾಪಾರ ವಹಿವಾಟಿಗೆ ಅವಕಾಶ: ಡಿಸಿಎಂ ಭರವಸೆ - Lock-down relaxation
ಆರೆಂಜ್ ಝೋನ್ ಆಗಿರುವ ಕಲಬುರಗಿ ಜಿಲ್ಲೆಯಲ್ಲಿ ಮೇ.4 ರಿಂದ ಸಲೂನ್ ಶಾಪ್ ಸೇರಿದಂತೆ ಕೆಲ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಾಜೋಳ ಹೇಳಿದ್ದಾರೆ.
ಕೊರೊನಾ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಂತರ ಮಾತನಾಡಿದ ಅವರು, ಮೇ 4 ರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸುವಂತೆ ಕೆಲ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ಕಾರಾಜೋಳ ಅವರು ಹೇಳಿರುವ ಪ್ರಕಾರ ಮೇ.4 ರಿಂದ ಜಿಲ್ಲೆಯಲ್ಲಿ ಸಲೂನ್ ಶಾಪ್, ಸ್ಪಾ, ಆಟೋ, ಟ್ಯಾಕ್ಸಿ ಹಾಗೂ ಕಾರುಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಯಾಣ ಮಾಡಬಹುದಾಗಿದೆ. ಅದೆ ರೀತಿ ಕೋರಿಯರ್, ಪೋಸ್ಟಲ್, ಕಾರ್ಖಾನೆ ಹಾಗೂ ಇನ್ನಿತರ ವಾಣಿಜ್ಯ ವಹಿವಾಟಿಗೆ ಅವಕಾಶ ಕಲ್ಪಿಸಿ ಕೊಡಬಹುದು ಎನ್ನಲಾಗುತ್ತಿದೆ. ಆದ್ರೆ ನಿರ್ಬಂಧಿತ ಪ್ರದೇಶ ಯತಾವತ್ತಾಗಿ ಮುಂದುವರೆಯಲಿದೆ ಎಂದು ಅವರು ಇದೇ ವೇಳೆ, ಸ್ಪಷ್ಟಪಡಿಸಿದ್ದಾರೆ.