ಸೇಡಂ: ಸ್ಥಳೀಯ ಸಿಮೆಂಟ್ ಕಾರ್ಖಾನೆಗಳು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಕಾಂಗ್ರೆಸ್ ಮುಖಂಡ ಮುಕ್ರಂಖಾನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಬಡವರಿಗೆ ಸ್ಥಳೀಯ ಕಾರ್ಖಾನೆಗಳು ನೆರವಿಗೆ ಬರಬೇಕೆಂದು ಆಗ್ರಹ.. - corona fear in kalburgi
ಕಳೆದ 40 ವರ್ಷಗಳಿಂದ ಕಾರ್ಖಾನೆ ನಡೆಸಿಕೊಂಡು ಬಂದಿದ್ದಾರೆ. ಆ ಕಾರ್ಖಾನೆ ಮಾಲೀಕರೆಲ್ಲ ನಿಗ್ರತಿಕರಿಗೆ, ಬಡವರಿಗೆ ನೆರವಾಗಬೇಕು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಮುಕ್ರಂಖಾನ್
40 ವರ್ಷಗಳಿಂದ ಸ್ಥಳೀಯ ಖನಿಜ ಸಂಪತ್ತು ಬಳಸಿ ವ್ಯಾಪಾರ ನಡೆಸಿದ್ದಾರೆ. ಈಗ ಕೊರೊನಾ ಮಹಾಮಾರಿಯಿಂದ ತಾಲೂಕಿನ ಜನತೆ ತತ್ತರಿಸಿದೆ. ಸ್ಥಳೀಯ ವಾಸವಿದತ್ತಾ ಸಿಮೆಂಟ್ಸ್, ರಾಜಶ್ರೀ ಸಿಮೆಂಟ್ಸ್, ಶ್ರೀಸಿಮೆಂಟ್, ಸೌಥ್ ಇಂಡಿಯಾ ಸಿಮೆಂಟ್, ಸೋಲಾರ ಕಂಪನಿಯವರು ಬಡವರಿಗೆ ಧವಸ-ಧಾನ್ಯ, ಸ್ಯಾನಿಟೈಸರ್, ಮಾಸ್ಕ್ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.