ಕಲಬುರಗಿ:ರಾತ್ರಿ ವೇಳೆ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲು ಯತ್ನಿಸುತ್ತಿದ್ದ ಗೋವುಗಳನ್ನು ರಕ್ಷಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 17 ಜಾನುವಾರುಗಳ ರಕ್ಷಣೆ: ಆರೋಪಿಗಳ ಬಂಧನ - ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪಿಗಳ ಬಂಧನ
ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲು ಯತ್ನಿಸುತ್ತಿದ್ದ ಗೋವುಗಳನ್ನು ಕಲಬುರಗಿಯ ಬಾರಾ ಹಿಲ್ಸ್ ಬಸ್ ನಿಲ್ದಾಣದ ಬಳಿ ತಡೆದು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಬೊಲೆರೋ ಪಿಕ್ ಅಪ್ ವಾಹನದ ಮೂಲಕ ಆರೋಪಿಗಳು ಜಾನುವಾರುಗಳನ್ನು ಸಾಗಿಸುವಾಗ ಕಲಬುರಗಿಯ ಬಾರಾ ಹಿಲ್ಸ್ ಬಸ್ ನಿಲ್ದಾಣದ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕಲಬುರಗಿ ತಾಲೂಕಿನ ಸಿಂಧಗಿಯಿಂದ ತರಲಾಗುತ್ತಿದ್ದ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ರಾತ್ರಿ ಗಸ್ತು ತಿರುಗುತ್ತಿದ್ದ ಪಿ.ಎಸ್.ಐ. ಯಶೋಧಾ ಕಟಕೆ, ವಾಹನ ತಡೆದು ಅದರಲ್ಲೇನಿದೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿ ಮಾಡಲು ಆರೋಪಿಗಳು ಯತ್ನಿಸಿದ್ದಾರೆ. ಕೊನೆಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಹ್ಮದ್ ಸಮೀರ್, ಮಹ್ಮದ್ ತೌಸೀಫ್ ಹಾಗೂ ಮಹ್ಮದ್ ಮಶಾಕ್ ಎಂದು ಗುರುತಿಸಲಾಗಿದೆ.
ಬೊಲೆರೋ ಪಿಕ್ ಅಪ್ ವಾಹನ ವಶಕ್ಕೆ ಪಡೆಯಲಾಗಿದ್ದು, ವಾಹನದಲ್ಲಿದ್ದ 17 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ. ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.