ಕಲಬುರಗಿ:ಆರೆಂಜ್ ಝೋಜ್ ಆಗಿರುವ ಕಲಬುರಗಿಯಲ್ಲಿ ಇಂದು ಮಧ್ಯಾಹ್ನದಿಂದ ಸಿಎಲ್2 ಮತ್ತು ಎಂಎಸ್ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಎಲ್ಲೆಡೆ ಮದ್ಯದ ಅಂಗಡಿಗಳು ಸೇರಿ ಬಹುತೇಕ ವಾಣಿಜ್ಯ ವಹಿವಾಟಿಗೂ ಅವಕಾಶ ಕಲ್ಪಿಸಲಾಗಿದೆ.
ಕಲಬುರಗಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ: ಜಿಲ್ಲಾಧಿಕಾರಿ - dc b sharat
ಕೊರೊನಾ ಭೀತಿಯ ಹಿನ್ನೆಲೆ ಆರೆಂಜ್ ಝೋನ್ನಲ್ಲಿರುವ ಕಲಬುರಗಿ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದ್ದಾರೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಎಲ್ಲೆಡೆ ಮದ್ಯದ ಅಂಗಡಿಗಳು ಸೇರಿ ಬಹುತೇಕ ವಾಣಿಜ್ಯ ವಹಿವಾಟಿಗೂ ಅವಕಾಶ ಕಲ್ಪಿಸಲಾಗಿದೆ.
![ಕಲಬುರಗಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ: ಜಿಲ್ಲಾಧಿಕಾರಿ Liquor shops opened in Orange Zone kalburgi](https://etvbharatimages.akamaized.net/etvbharat/prod-images/768-512-7056178-421-7056178-1588588755100.jpg)
ಆರೆಂಜ್ ಝೋನ್ ಕಲಬುರಗಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ: ಡಿಸಿ
ಆರೆಂಜ್ ಝೋನ್ ಕಲಬುರಗಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ: ಡಿಸಿ
ಏನಿರುತ್ತೆ?
- ಹೋಟೆಲ್ಗಳಿಂದ ಪಾರ್ಸೆಲ್ ಸರ್ವಿಸ್
- ಸಿಮೆಂಟ್ ಕಾರ್ಖಾನೆ ಆರಂಭ
- ಅಂತರ ಜಿಲ್ಲೆಯಲ್ಲಿ ಶೇ.50 ರಷ್ಟು ಬಸ್ಗಳ ಸಂಚಾರ
- ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಖಾಸಗಿ ವಾಹನ ಸಂಚಾರ
- ಸಾಮಾಜಿಕ ಅಂತರ ಕಾಯ್ದುಕೊಂಡು ಬಹುತೇಕ ಅಂಗಡಿಗಳು ಪ್ರಾರಂಭವಾಗಲಿವೆ
ಏನಿರಲ್ಲ? (ನಿರ್ಬಂಧಗಳು)
- ರೈಲು ನಿರ್ಬಂಧ
- ಅಂತಾರಾಜ್ಯ ಬಸ್ ಇಲ್ಲ
- ಶಾಲೆ, ಕಾಲೇಜು, ಟ್ರೈನಿಂಗ್ ಸೆಂಟರ್ ಇಲ್ಲ
- ಸಿನಿಮಾ ಹಾಲ್
- ಮಾಲ್ಗಳಿಗೆ ಅವಕಾಶವಿಲ್ಲ
- ಸ್ಪೋಟ್ಸ್ ಆಯೋಜನೆ, ಸ್ವಿಮಿಂಗ್ ಫೂಲ್, ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶವಿಲ್ಲ
- ಬಟ್ಟೆ ಅಂಗಡಿಗಳು ತೆರೆಯಲು ನಿರ್ಬಂಧ
Last Updated : May 4, 2020, 5:46 PM IST